ಮತ ಎಂಬ ಪದಕ್ಕೆ ತಕ್ಷಣ ಮತ್ತು ಸಾಮಾನ್ಯವಾಗಿ ನಾವು ಅನ್ವಯಿಸುವ ಅರ್ಥ; ಧರ್ಮ ಮತ್ತು ಓಟು. ಆದರೆ ಮತ ಎಂಬ ಪದಕ್ಕೆ ಆಲೋಚನೆ, ಅಭಿಪ್ರಾಯ, ಆಚಾರ, ವಿಚಾರ, ಸಿದ್ಧಾಂತ ಎಂಬ ಅರ್ಥಗಳೂ ಇವೆ. ಈ ತಾಣ, ಆ ಇತರ ಅರ್ಥಗಳಿಗೆ ವೇದಿಕೆ. ಎಡ, ಬಲ, ಮಧ್ಯಮ ಮತ್ತು ಈ ಮೂರೂ ಅಲ್ಲದವೂ ಸೇರಿ ಕೇಸರಿ, ಹಸಿರು, ಬಿಳಿ, ಕೆಂಪು, ನೀಲಿ.. ಇತ್ಯಾದಿ ಎಲ್ಲ ಬಣ್ಣಗಳೂ ಇಲ್ಲಿ ಹರಡಿಕೊಳ್ಳಲಿವೆ. ನಿಮ್ಮ ಕಮೆಂಟು ಅಥವಾ ವಿಚಾರಗಳು ಘನಗಂಭೀರವಾಗಿರಬೇಕು ಎಂಬ ಷರತ್ತೇನೂ ಇಲ್ಲ. ಕೀಟಲೆ, ತಮಾಷೆ ಅಥವಾ ಆಯಾ ಕಾಲಕ್ಕೆ ‘ವಿತಂಡ’ ಅನ್ನಿಸಿಕೊಳ್ಳುವ ‘ಚಾರ್ವಾಕ ವಾದ’ಗಳಿಗೂ ಮುಕ್ತಮನಸ್ಸಿನ ಸ್ವಾಗತವಿರುತ್ತದೆ!