ಕೃಷ್ಣಾಷ್ಟಮಿಗೂ ಬಂತಲ್ಲ ಉದಾರವಾದಿಗಳ ತಕರಾರು!


ಇದು ಇತ್ತೀಚಿನ ನಾಕೈದು ವರ್ಷಗಳಿಂದ ಅತಿಯಾಗಿ ಕಂಡುಬರ್ತಿರೋ ಟ್ರೆಂಡು; ಹಿಂದು ಹಬ್ಬಹರಿದಿನಗಳ ಸಂದರ್ಭ ಏನಾದರೂ ಒಂದು ಕೊಂಕು ತೆಗೆದು, ಆಚರಣೆಯ ಬಗ್ಗೆ ಒಂದು ರೀತಿಯ ಮುಜುಗರ, ಕೀಳರಿಮೆ ಹುಟ್ಟಿಸುವ ಕೆಲಸ. ಸೋ ಕಾಲ್ಡ್ ಚಿಂತಕರು, ಉದಾರವಾದಿಗಳು, ಪರಿಸರವಾದಿಗಳು.. ಹೀಗೆ ಬಹುತೇಕ ಎಲೈಟ್ ಕೆಟಗರಿಯ ಮಂದಿ ಈ ಹಿಂದು ಆಚರಣೆಗಳ ಹಳಿಯುವ ಕೆಲಸದಲ್ಲಿ ಮುಂಚೂಣಿಯಲ್ಲಿರ್ತಾರೆ.

ಕಾಲಕ್ಕೆ ತಕ್ಕಂತೆ ಬದಲಾಗುವ ಮತ್ತು ಸರಿ ತಪ್ಪುಗಳನ್ನು ವಿವೇಚಿಸುವ ಸಾಮರ್ಥ್ಯ ಇರೋ ಹಿಂದು ಸಮುದಾಯ ಆಗಾಗ ತಾನೇ ಬದಲಾವಣೆಗಳನ್ನು ಸ್ವಾಗತಿಸಿ, ಅಳವಡಿಸಿಕೊಂಡಿದೆ. ಉದಾಹರಣೆಗೆ ಗಣೇಶನ ಹಬ್ಬ ಬಂದ ತಕ್ಷಣ “ಕೆಮಿಕಲ್ ಪೇಂಟಿಂಗ್ನಿಂದ ಎಷ್ಟೆಲ್ಲ ಮಾಲಿನ್ಯ ಕಣ್ರೀ” ಅಂತ ರಾಗ ತೆಗೀತಿದ್ರು ಪರಿಸರಸ್ನೇಹಿಗಳು. ಈಚಿನ ವರ್ಷಗಳಲ್ಲಿ ಸ್ವತಃ ಹಿಂದು ಸಮುದಾಯದವರೇ ರಾಸಾಯನಿಕಮುಕ್ತ ಮಣ್ಣಿನ ಗಣಪನ ಮೂರ್ತಿಯ ಪೂಜೆಗೆ ಒಲವು ತೋರಿಸ್ತಿದಾರೆ.

ಆದರೆ ನಮ್ಮ ಉದಾರವಾದಿಗಳಿಗೆ ಮಾತ್ರ ಸಮಾಧಾನ ಇಲ್ಲ. ದೀಪಾವಳಿ ಬಂದರೆ “ಅಯ್ಯೋ ಎಂಥ ಸೌಂಡು ಪೊಲ್ಯೂಷನ್ನು, ಬೀದಿ ನಾಯಿಗಳೆಲ್ಲ ಎಷ್ಟು ಹೆದರ್ಕೋತವೆ ಗೊತ್ತಾ?” ಅಂತ ಪ್ರಾಣಿಮಿತ್ರರು ಆಕ್ರಂದನ ಮಾಡ್ತಾರೆ. ಹಾಳಾಗಿ ಹೋಗ್ಲಿ ಸೌಂಡ್ಲೆಸ್ ಪಟಾಕಿ ಹೊಡೆಸಿ ಬಾನಿನಲ್ಲಿ ಅರಳೋ ಬಣ್ಣದ ಚಿತ್ತಾರ ಕಣ್ತುಂಬಿಕೊಳ್ಳೋಣ ಅಂದ್ರೂ ಇವರಿಗೆ ಅದರಲ್ಲೂ ಸಮಸ್ಯೆ! “ಯಪ್ಪಾ, ಇಷ್ಟು ಪಟಾಕಿ ಹೊಡದ್ರೆ ಪೊಲ್ಯೂಷನ್ ಎಷ್ಟು ಹೆಚ್ಚಾಗುತ್ತೆ. ಹಿಂಗಾದ್ರೆ ಉಸಿರಾಡದಾದ್ರೂ ಹೆಂಗೆ?” ಅಂತ ಕಣ್ಣೀರು ಹಾಕ್ತಾರೆ!

“ಹಸುವಿನ ತುಪ್ಪದ ಬದಲು ಸಸ್ಯಜನ್ಯ ತುಪ್ಪ ತಿನ್ನಿ. ಹಸುಗಳನ್ನೂ ಸಂತೋಷವಾಗಿರಿಸಿ” ಅಂತ ಟ್ವೀಟು ಮಾಡಿದೆ ಪೆಟಾ ಇಂಡಿಯಾ! ಹಸುವಿನ ತುಪ್ಪ ತಿಂದರೆ ಹಸು ಬೇಜಾರು ಮಾಡಿಕೊಳ್ಳುತ್ತೆ ಅನ್ನೋ ಅತಿರೇಕದ ಮಾತಾಡಿರುವ ಪ್ರಾಣಿ ದಯಾ ಸಂಘದ ಬುದ್ಧಿವಂತರೇ, ನೀವು ಹೊಟ್ಟೆಗೇನು ತಿಂತೀರಿ?

ಅಣ್ಣ-ತಂಗಿಯರ ಬಾಂಧವ್ಯದ ಪ್ರತೀಕವಾದ ರಾಖಿ ಹಬ್ಬ ಇವರಿಗೆ ಪುರುಷಾಹಂಕಾರದ ಸರಕಾಗಿ ಕಾಣಿಸುತ್ತೆ. ಗಂಡನ ಸುಖ ಬಯಸಿ ಹೆಂಡತಿ ಒಂದು ದಿನ ಉಪವಾಸ ಇರುವ ಕರ್ವಾಚೌತ್ ಅಂತೂ ಪುರುಷ ದಬ್ಬಾಳಿಕೆಯ ಪರಮಾವಧಿಯಂತೆ ಕಾಣುತ್ತೆ. ಹೇಳ್ತಾ ಹೋದ್ರೆ ಹಿಂದುಗಳ ಬಹುತೇಕ ಎಲ್ಲ ಹಬ್ಬ ಹರಿದಿನಗಳಲ್ಲೂ ಇವರಿಗೊಂದು ಸಮಸ್ಯೆ ಕಂಡೇ ಕಾಣುತ್ತೆ. ಒಂದು ಕೊಂಕು ಇದ್ದೇ ಇರುತ್ತೆ. 

ಹಿಂದುಗಳ ಹಬ್ಬಗಳ ಸಂದರ್ಭ ಹೀಗೆ ವಿಲವಿಲ ಒದ್ದಾಡುವ ಉದಾರವಾದಿಗಳು ಎಂಥ ಗೋಸುಂಬೆಗಳು ಅಂದ್ರೆ, ದೀಪಾವಳಿಯ ಪಟಾಕಿ ಇವರಿಗೆ ಮಾಲಿನ್ಯ. ಆದ್ರೆ ಹೊಸ ವರ್ಷಾಚರಣೆಗೆ ಹೊಡೆಯೋ ಪಟಾಕಿ ಇವರ ಲೆಕ್ಕದಲ್ಲಿ ಪರಿಸರ ಸಂರಕ್ಷಕ! ರಾಖಿ, ಕರ್ವಾಚೌತ್ನಂಥ ಹಬ್ಬಗಳಂದು ಹಿಂದು ಸಮಾಜದ ಹೆಣ್ಣುಮಕ್ಕಳ ಶೋಷಣೆ ಬಗ್ಗೆ ಗಂಟಲು ಹರಕೊಳ್ಳುವ ಉದಾರವಾದಿಗಳು ವರ್ಷದ ಮುನ್ನೂರೈವತ್ತು ದಿನವೂ ಬುರ್ಖಾದ ಬಂಧನದಲ್ಲಿ ಹೆಂಗಸರನ್ನಿಡುವ ಮುಸ್ಲಿಂ ಧರ್ಮದ ಪುರುಷ ದಬ್ಬಾಳಿಕೆಯ ಬಗ್ಗೆ ಅಪ್ಪಿತಪ್ಪಿಯೂ ಸೊಲ್ಲೆತ್ತುವುದಿಲ್ಲ!

ಅಂಥ ಮಂದಿಗೆ ಕೃಷ್ಣ ಜನ್ಮಾಷ್ಟಮಿಯ ದಿನ ಕೊಂಕು ತೆಗೀಲಿಕ್ಕೆ ಏನೂ ಸಿಗಲಿಲ್ಲವಾ ಅನ್ನೋ ಕುತೂಹಲವಿತ್ತು. ಆ ಕುತೂಹಲಕ್ಕೆ ವಿದೇಶದ ಪ್ರಾಣಿಸಂರಕ್ಷಣಾ ಸಂಸ್ಥೆ ಪೆಟಾ ಉತ್ತರ ಕೊಟ್ಟಿದೆ!
“ಹಸುವಿನ ತುಪ್ಪದ ಬದಲು ಸಸ್ಯಜನ್ಯ ತುಪ್ಪ ತಿನ್ನಿ. ಹಸುಗಳನ್ನೂ ಸಂತೋಷವಾಗಿರಿಸಿ” ಅಂತ ಟ್ವೀಟು ಮಾಡಿದೆ ಪೆಟಾ ಇಂಡಿಯಾ! ಹಸು ಸಾಕಣೆಯ ಮೂಲ ಉದ್ದೇಶವೇ ಹಾಲು, ಗೊಬ್ಬರಗಳ ಬಳಕೆ. ಹಾಲು ಮಾರಿ ಜೀವನ ಸಾಗಿಸುವ ರೈತ ಸಮುದಾಯ ಹಸುವನ್ನು ತಮ್ಮ ಮನೆಯ ಸದಸ್ಯನಷ್ಟೇ ವಾತ್ಸಲ್ಯದಿಂದ ನೋಡಿಕೊಳ್ಳುತ್ತದೆ. ಹಾಗಿರುವಾಗ ಹಸುವಿನ ತುಪ್ಪ ತಿಂದರೆ ಅದಕ್ಕೆ ಬೇಜಾರಾಗುತ್ತೆ ಅನ್ನೋ ಅತಿರೇಕದ ಮಾತಾಡಿರುವ ಪ್ರಾಣಿ ದಯಾ ಸಂಘದ ಬುದ್ಧಿವಂತರೇ, ನೀವು ಹೊಟ್ಟೆಗೇನು ತಿಂತೀರಿ?

No comments:

Post a Comment