ಎಸಿ ಸೆಟ್ಟಿಂಗ್‌ಗೆ ಕಿಡಿಕಾರಿ ನಗೆಪಾಟಲಾದರು!


ಸೋಷಿಯಲ್ ಮಾಧ್ಯಮ ಒಂಥರಾ ಮಜಾಪ್ರಪಂಚ! ಇಲ್ಲಿ ಸುಳ್ಳು ಹರಡುವ ಬಿಜೆಪಿ, ಕಾಂಗ್ರೆಸ್ ಬೆಂಬಲಿಗರು ಇರುವ ಹಾಗೆಯೇ ಮೋದಿ ಸರ್ಕಾರದ ಎಲ್ಲ ನಿರ್ಣಯಗಳನ್ನೂ ವಿರೋಧಿಸುವ ‘ಬುದ್ಧಿವಂತರ ಬಳಗ’ವೂ ಇದೆ. ಈ ಬಳಗದ ಸದಸ್ಯೆ, ಪತ್ರಕರ್ತೆ ನಿಧಿ ರಜ್ದಾನ್ ಸರ್ಕಾರದ ಒಂದು ಕ್ರಮವನ್ನು ಏನು ಅಂತಲೂ ಪರಿಶೀಲಿಸದೆ ವಿರೋಧಿಸಿ ಎಲ್ಲರೆದುರು ಜಾರಿಬಿದ್ದಿದ್ದಾರೆ!

ಆಗಿದ್ದಿಷ್ಟು; ವಿದ್ಯುತ್ ಉಳಿತಾಯಕ್ಕೆ ಮತ್ತು ಪರಿಸರ ಸಂರಕ್ಷಣೆಗೆ ಕೇಂದ್ರ ಸರ್ಕಾರ ಒಂದಿಷ್ಟು ಕ್ರಮ ತಗೊಳ್ತಿದೆ. ಏರ್ಕಂಡೀಶನರ್ ಉತ್ಪಾದಕರಿಗೆ ಡಿಫಾಲ್ಟ್ ತಾಪಮಾನವನ್ನ 24 ಡಿಗ್ರಿಗೆ ಸೆಟ್ ಮಾಡುವಂತೆ ಸೂಚಿಸಲು ನಿರ್ಧರಿಸಿದೆ. ಇಂಧನ ದಕ್ಷತೆ ಆಯೋಗ (ಬ್ಯೂರೋ ಆಫ್ ಎನರ್ಜಿ ಎಫೀಷಿಯನ್ಸಿ) ಮಾಡಿದ ಶಿಫಾರಸಿನ ಅನ್ವಯ ಈ ಕ್ರಮಕ್ಕೆ ಕೇಂದ್ರ ಇಂಧನ ಸಚಿವಾಲಯ ಮುಂದಾಗಿದೆ.

ಇದರಿಂದ ಎರಡು ಲಾಭಗಳಿವೆ. ಸಾಮಾನ್ಯವಾಗಿ 40 ಡಿಗ್ರಿವರೆಗೆ ತಾಪಮಾನ ಇರುವಾಗ ಕೊಠಡಿಯ ಏರ್ಕಂಡೀಷನರ್ 25 ಡಿಗ್ರಿಗೆ ಸೆಟ್ ಮಾಡಿದರೂ ಸಾಕು, ಕೋಣೆ ತಂಪಾಗುತ್ತದೆ. ಆದರೆ ಅದನ್ನು 18ರವರೆಗೆ ಇಳಿಸುವ ಜಾಯಮಾನ ನಮ್ಮಲ್ಲಿದೆ. ಏರ್ಕಂಡೀಶನರ್‌ನ ಸೆಟ್ಟಿಂಗ್ ಕಡಿಮೆ ತಾಪಮಾನಕ್ಕೆ ಇಟ್ಟಷ್ಟೂ ಇಂಧನ ವೆಚ್ಚ ಏರುವ ಜೊತೆಗೆ ಪರಿಸರಕ್ಕೆ ಹಾನಿಕರವಾದ ಹಸಿರುಮನೆ ಅನಿಲದ ಬಿಡುಗಡೆಯೂ ಹೆಚ್ಚುತ್ತದೆ.

ಡಿಫಾಲ್ಟ್‌ ಸೆಟ್ಟಿಂಗ್‌ಗೆ ನಿರ್ಬಂಧ ಯಾಕೆ ಅಂದರೆ..

16 ಡಿಗ್ರಿಯಿಂದ 22ರವರೆಗೆ ಒಂದೊಂದು ಕಂಪನಿ ಒಂದೊಂದು ಬಗೆಯ ಡಿಫಾಲ್ಟ್ ಸೆಟ್ಟಿಂಗ್ ಹೊಂದಿರುತ್ತದೆ. ಎಸಿ ಆನ್ ಮಾಡಿದಾಗ ಈ ಡಿಫಾಲ್ಟ್ ಸೆಟ್ಟಿಂಗ್ನಲ್ಲೇ ಕೆಲಸ ಮಾಡುತ್ತದೆ. ಅಂದರೆ 18 ಡಿಗ್ರಿ ಸೆಟ್ಟಿಂಗ್ನ ಎಸಿ ಆನ್ ಮಾಡಿದಾಗ 18 ಡಿಗ್ರಿ ತಾಪಮಾನದಲ್ಲೇ ಕೆಲಸ ಮಾಡುತ್ತದೆ. ಇದರ ಬದಲು ಎಲ್ಲ ಉತ್ಪಾದಕರಿಗೆ 24 ಡಿಗ್ರಿಯ ಸೆಟ್ಟಿಂಗ್ ಕಡ್ಡಾಯ ಮಾಡಿದರೆ ಆಗ ಸಾಕಷ್ಟು ವಿದ್ಯುತ್ ಉಳಿತಾಯ ಆಗುತ್ತದೆ. ಅಷ್ಟಕ್ಕೂ ಇದು ಕೇವಲ ಎಸಿಯ ಡಿಫಾಲ್ಟ್ ಸೆಟ್ಟಿಂಗ್ ಅಷ್ಟೇ; ಇದನ್ನು ಗ್ರಾಹಕ ಹೆಚ್ಚೂ ಕಡಿಮೆ ಮಾಡಿಕೊಳ್ಳಲು ಅವಕಾಶ ಇದ್ದೇ ಇರುತ್ತದೆ. ಅಂದಹಾಗೆ ಈ ರೀತಿಯ ಕ್ರಮ ಜಪಾನ್ನಲ್ಲಿ ಈಗಾಗಲೇ ಜಾರಿಯಲ್ಲಿದೆ. ಅಲ್ಲಿ 28 ಡಿಗ್ರಿಯ ಡಿಫಾಲ್ಟ್ ಸೆಟ್ಟಿಂಗ್ ಕಡ್ಡಾಯ.

ಆದರೆ ಇದ್ಯಾವುದನ್ನೂ ತಿಳಿದುಕೊಳ್ಳದೆ ಪತ್ರಕರ್ತೆ ನಿಧಿ ರಜ್ದಾನ್ ಸರ್ಕಾರ ಎಲ್ಲವನ್ನೂ ನಿಯಂತ್ರಿಸಲು ಮುಂದಾಗಿದೆ ಅಂತ ತಮ್ಮ ಎಂದಿನ ಶೈಲಿಯಲ್ಲಿ ಹರಿಹಾಯ್ದಿದ್ದಾರೆ.
ಎಸಿಯ ನಂತರ ಆಹಾರ ಎಷ್ಟು ಸೇವಿಸಬೇಕು, ಎಷ್ಟು ಬಾರಿ ಸ್ನಾನ ಮಾಡಬೇಕು ಅನ್ನೋದನ್ನೂ ನಿಯಂತ್ರಿಸ್ತಾರಾ ಅಂತ ಪ್ರಶ್ನಿಸಿದ್ದು ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಚತುರ್ವೇದಿ
ಇದು ಕೇವಲ ಡಿಫಾಲ್ಟ್‌ ಸೆಟ್ಟಿಂಗ್ ಅಂತ ಪ್ರಶಾಂತೋ ಎಂಬವರು ನಿಧಿ ರಜ್‌ದಾನ್‌ಗೆ ತಿಳಿಹೇಳುವ ಪ್ರಯತ್ನ ಮಾಡಿದ್ರು.
ಜಪಾನ್‌ನಲ್ಲಿ ಈಗಾಗಲೇ ಇಂಥ ಕ್ರಮ ಇದೆ ಅಂತ ಗಮನಕ್ಕೆ ತಂದಿದ್ದು ಎಒಎಲ್‌ಸ್ವಾಮೀಜಿ
ನಿಧಿ ರಜ್ದಾನ್‌ರ ಮೂರ್ಖತನದ ಹೇಳಿಕೆ ಬಿಜೆಪಿ ಬೆಂಬಲಿಗರ ತಮಾಷೆಗೆ ಸಾಕಷ್ಟು ಸರಕು ಒದಗಿಸಿತು.

No comments:

Post a Comment