ರಾಹುಲ್ ಗಾಂಧಿ ಹೇಳಿದ್ದ ಕಾನ್ಸೆಪ್ಟ್ ತಮಿಳುನಾಡಿನಲ್ಲಿ ಸಾಕಾರ


ಈ ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದೆಲ್ಲವೂ ಪರಮ ಸತ್ಯ ಅಂತ ನಂಬುವ ಒಂದು ಸಮುದಾಯ ಇದೆ. ಈ ಸಮುದಾಯಕ್ಕೆ ವಿಪಕ್ಷದ ಎಲ್ಲ ನೇತಾರರೂ ವಿಲನ್‌ಗಳು. ಅದರಲ್ಲೂ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಏನು ಮಾತಾಡಿದರೂ ಅದು ತಮಾಷೆಯ ಸರಕು. ಆತನನ್ನು ಶತಮೂರ್ಖ ಅಂತ ಬಿಂಬಿಸೋಕೆ ಈ ಟ್ರಾಲುಗಳು ವಿಡಿಯೋ ತಿರುಚುವುದು, ಹೇಳಿಕೆಗಳನ್ನು ಬದಲಿಸುವುದು, ನಕಲಿ ಹೇಳಿಕೆಗಳನ್ನು ಸೃಷ್ಟಿಸುವುದು ಹೀಗೆ ವಿವಿಧ ಕಸರತ್ತುಗಳನ್ನು ಮಾಡುತ್ತಿರುತ್ತಾರೆ.

ಇತ್ತೀಚೆಗೆ ಸಿಂಗಾಪುರದಲ್ಲಿ ಮುಕ್ತ ಮಾಧ್ಯಮ ಸಂವಾದ ನಡೆಸಿದ್ದ ವೇಳೆ ರಾಹುಲ್ ಗಾಂಧಿ ವೈದ್ಯಕೀಯ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆ ತರಬಲ್ಲ ಒಂದು ಕಾನ್ಸೆಪ್ಟ್ ಬಗ್ಗೆ ಅನಿಸಿಕೆ ಹಂಚಿಕೊಂಡಿದ್ದರು. ಎಲ್ಲ ಎಂಆರ್‌ಐ ಮಷೀನ್‌ಗಳನ್ನು ಇಂಟರ್‌ ಕನೆಕ್ಟ್ ಮಾಡುವುದರಿಂದ ರೋಗಿಯ ದತ್ತಾಂಶ ವಿನಿಮಯ ಸಲೀಸಾಗುತ್ತದೆ. ಇಂಥ ತಂತ್ರಜ್ಞಾನ ಬಳಕೆಯಿಂದ ರೋಗಪತ್ತೆ ಮತ್ತು ಪರಿಹಾರದಲ್ಲಿ ಕ್ರಾಂತಿಕಾರಕ ಬದಲಾವಣೆ ತರಬಹುದು ಎಂದಿದ್ದರು. ಆದರೆ ಇಂಥವುಗಳನ್ನು ಅರ್ಥ ಮಾಡಿಕೊಳ್ಳುವ ಸಾಮರ್ಥ್ಯ ಇಲ್ಲದ ಬಿಜೆಪಿ ಭಕ್ತರು ಇದೊಂದು ಬಯಂಕರ ಕಾಮಿಡಿ ಎನ್ನುವಂತೆ ರಾಹುಲ್ ಗಾಂಧಿಯ ಮೀಮ್‌ಗಳನ್ನು ಮಾಡಿ ನಕ್ಕು ಖುಷಿಪಟ್ಟಿದ್ದರು.

ಇದೀಗ ತಮಿಳುನಾಡಿನಲ್ಲಿ ಎಲ್ಲ ಎಂಆರ್‌ಐಗಳನ್ನು ಇಂಟರ್‌ ಕನೆಕ್ಟ್ ಮಾಡಲು ಅಲ್ಲಿನ ಆಡಳಿತ ಮುಂದಾಗಿದೆ. ದೇಶದಲ್ಲೇ ಮೊದಲ ಬಾರಿ ಇಂಥ ವ್ಯವಸ್ಥೆ ಅಳವಡಿಸಿಕೊಳ್ಳುತ್ತಿರುವ ತಮಿಳುನಾಡು ದೇಶದ ಇತರ ಭಾಗಗಳಿಗೆ ಮಾದರಿಯಾಗಬಲ್ಲದು ಅನ್ನುವ ನಿರೀಕ್ಷೆಯೂ ಹುಟ್ಟಿದೆ.

No comments:

Post a Comment