ವಿಕಾಸ್ ಮಿಶ್ರಾನ ವರ್ಗಾವಣೆ; ಸಚಿವೆ ಸುಷ್ಮಾಗೆ ಬೈಗುಳ!

ತನ್ವಿ ಸೇಠ್ (ಸಾದಿಯಾ ಅನಿಸ್) - ಮೊಹಮಸ್ ಅನಸ್ ದಂಪತಿ / ಪಾಸ್‌ಪೋರ್ಟ್‌ ಅಧಿಕಾರಿ ವಿಕಾಸ್ ಮಿಶ್ರಾ

ಇತ್ತೀಚೆಗೆ ಸೃಷ್ಟಿಸಿರುವ ಸೋಷಿಯಲ್ ಮೈಂಡ್ಸೆಟ್ ಎಷ್ಟು ಅಪಾಯಕಾರಿ ಆಗ್ತಿದೆ ಅನ್ನೋದಕ್ಕೆ ಇದೊಂದು ನಿದರ್ಶನ, ಹಿಂದು ಪರ ಸಮೂಹ ಸಾಮಾಜಿಕ ತಾಣದಲ್ಲಿ ಸಚಿವೆ ಸುಷ್ಮಾ ಸ್ವರಾಜ್ರ ಮೇಲೆ ಬೈಗುಳಗಳ ದಾಳಿ ನಡೆಸಿದೆ! ಈ ಬೈಗುಳಕ್ಕೆ ಕಾರಣವಾದ ಘಟನೆಯ ಹಿನ್ನೆಲೆ ಹೀಗಿದೆ; ಲಖನೌದ ಪಾಸ್ಪೋರ್ಟ್ ಸೇವಾ ಕೇಂದ್ರದ ಅಧಿಕಾರಿ ವಿಕಾಸ್ ಮಿಶ್ರಾ. ಇತ್ತೀಚೆಗೆ ಹಿಂದು-ಮುಸ್ಲಿಂ ದಂಪತಿಗೆ ದಾಖಲೆ ಪರಿಶೀಲನೆ ನೆಪದಲ್ಲಿ ಅನಗತ್ಯ ಕಿರುಕುಳ ನೀಡಿದರು ಅನ್ನೋ ಆರೋಪ ಕೇಳಿಬಂದಿತ್ತು. ಮೊಹಮದ್ ಅನಸ್ ಸಿದ್ದಿಕಿ ಮತ್ತು ತನ್ವಿ ಸೇಠ್ ಅನ್ನೋ ಮುಸ್ಲಿಂ-ಹಿಂದು ದಂಪತಿ ಪಾಸ್ಪೋರ್ಟ್ ಅರ್ಜಿ ಸಲ್ಲಿಸಲು ತೆರಳಿದಾಗ, ಮಹಿಳೆಯ ಮದುವೆ ದಾಖಲಾತಿ (ನಿಖಾಹ್ ನಾಮಾ) ಕೇಳಿದ ವಿಕಾಸ್ ಮಿಶ್ರಾ, ಅದರಲ್ಲಿ ತನ್ವಿಯ ಹೆಸರು ಸಾದಿಯಾ ಅನಸ್ ಎಂದಿರುವುದನ್ನು ಗಮನಿಸಿದ್ದಾರೆ. ಅದರಂತೆ ಹೆಸರು ಬದಲಿಸಿಕೊಳ್ಳಿ ಎಂದಿದ್ದಾರೆ. ಮದುವೆಯಾಗಿ 12 ವರ್ಷಗಳಾಗಿವೆ. ಹೀಗೇ ಇದ್ದೇವೆ. ಈಗ ಹೆಸರು ಬದಲಿಸಿಕೊಳ್ಳಲ್ಲ ಅಂತ ಅಂದಿದ್ದಾರೆ ತನ್ವಿ. ಆಗ ಅನ್ವರ್ಗೆ ಧರ್ಮ ಬದಲಿಸಿಕೊಂಡು ಮದುವೆಯಾಗಿ ಸಪ್ತಪದಿ ಹಾಕು ಅಂತೆಲ್ಲ ವಿಕಾಸ್ ಮಿಶ್ರಾ ಹೇಳಿ ಮಾನಸಿಕ ಕಿರುಕುಳ ನೀಡಿದರು ಅನ್ನೋದು ದಂಪತಿಗಳ ಆರೋಪ. ಈ ಬಗ್ಗೆ ಸಚಿವೆ ಸುಷ್ಮಾ ಸ್ವರಾಜ್ಗೆ ಟ್ವೀಟ್ ಮಾಡಿದ್ದ ತನ್ವಿ ಕ್ರಮಕ್ಕೆ ಆಗ್ರಹಿಸಿದ್ದರು. ಅದಾಗಿ ಎರಡು ದಿನಗಳ ನಂತರ ತನ್ವಿಗೆ ಪಾಸ್ಪೋರ್ಟ್ ಜಾರಿ ಮಾಡಿ, ವಿಕಾಸ್ ಮಿಶ್ರಾರನ್ನ ವರ್ಗಾವಣೆ ಮಾಡಲಾಗಿದೆ. ಈ ಮಧ್ಯೆ ಕುಲದೀಪ್ ಸಿಂಗ್ ಅನ್ನುವಾತ, ಘಟನೆ ನಡೆದಾಗ ತಾನು ಸ್ಥಳದಲ್ಲೇ ಇದ್ದೆ. ವಿಕಾಸ್ ಮಿಶ್ರಾ ದಂಪತಿ ಜೊತೆ ಅಸಭ್ಯ ವರ್ತನೆ ಮಾಡಿಲ್ಲ. ಹೆಸರಿನಲ್ಲಿರುವ ಗೊಂದಲದ ಬಗ್ಗೆ ಕೇವಲ ವಿಚಾರಣೆ ನಡೆಸಿದ್ದಾರೆ ಅಷ್ಟೇ. ದಂಪತಿ ಆರೋಪ ಸುಳ್ಳು ಅಂತ ವಿಕಾಸ್ ಮಿಶ್ರಾ ಬೆಂಬಲಕ್ಕೆ ನಿಂತಿದ್ದ. ಇವೆಲ್ಲವುಗಳ ಹಿನ್ನಲೆಯಲ್ಲಿ ಹಿಂದು ಪಡೆ ವಿಕಾಸ್ ಮಿಶ್ರಾ ಬೆಂಬಲಕ್ಕೆ ನಿಂತಿತ್ತು. ಶಿವಸೇನೆ ಮಿಶ್ರಾಗೆ ಸನ್ಮಾನ ಮಾಡುವುದಾಗಿಯೂ ಹೇಳಿದೆ!

ಇದಿಷ್ಟೂ ಬೆಳವಣಿಗೆಗಳ ಬಗ್ಗೆ ಅರಿವಿಲ್ಲದ, ವಿದೇಶ ಪ್ರವಾಸದಿಂದ ನಿನ್ನೆಯಷ್ಟೇ ಮರಳಿರುವ ಸುಷ್ಮಾಗೆ ತಮ್ಮ ಟ್ವಿಟರ್ ಟೈಮ್ಲೈನ್ ನೋಡಿ ಆಘಾತವಾಗಿದೆ. ವಿಕಾಸ್ ಮಿಶ್ರಾ ವರ್ಗಾವಣೆ ವಿರೋಧಿಸಿ ಸುಷ್ಮಾ ವಿರುದ್ಧ ಕಿಡಿಕಾರಿರುವವರಲ್ಲಿ ಕೆಲವರ ಬೈಗುಳಗಳನ್ನು ಅವರು ಶೇರ್ ಮಾಡಿದ್ದಾರೆ.
ಇದು ನಿಮಗೆ ಕಸಿ ಮಾಡಲಾದ ಮುಸ್ಲಿಂ ಕಿಡ್ನಿಯ ಪರಿಣಾಮವೇ ಅನ್ನೋದು ಇಂದ್ರಾ ಬಾಜ್‌ಪೈ ಎಂಬಾಕೆಯ ಪ್ರಶ್ನೆ
ಸೆಕ್ಯುಲರ್ ನಾಟಕವಾಡುವ ಈಕೆಯನ್ನು ಕೊಲ್ಲಬೇಕು ಅಂದಿದ್ದಾನೆ ಭಾರತ್1 ಎಂಬ ನಕಲಿ ಖಾತೆಯ ಹಿಂದಿರುವ ವ್ಯಕ್ತಿ!
ಇದೇ ರೀತಿಯ ಕೀಳು ಮಟ್ಟದ ಹೇಳಿಕೆ ಇನ್ನೊಬ್ಬನದು; ಸುಷ್ಮಾಗಿರೋದು ಒಂದೇ ಕಿಡ್ನಿ. ಅದು ಬೇಗ ಹಾಳಾಗುತ್ತೆ ಮತ್ತು ಆಕೆ ಸಾಯುತ್ತಾಳೆ ಅಂದಿದ್ದಾನೆ ಕ್ಯಾ. ಸರಬ್ಜಿತ್ ಧಿಲ್ಲೋನ್
ವಿಪರ್ಯಾಸ ಅಂದ್ರೆ ಈ ರೀತಿ ಹೇಳಿದ ಧಿಲ್ಲೋನ್‌ ತನ್ನ ಬಯೋದಲ್ಲಿ ಜನರಿಗೆ ಸ್ಫೂರ್ತಿ ನೀಡುವವ ಅಂತ ಹಾಕಿಕೊಂಡಿದ್ದಾನೆ!

No comments:

Post a Comment