ಇನ್ನು ಮೊಬೈಲ್‌ನಲ್ಲೇ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಿ


ಸರ್ಕಾರಿ ಪ್ರಕ್ರಿಯೆಗಳನ್ನು ಜನಸ್ನೇಹಿಯಾಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಅನೇಕ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಪಾಸ್ಪೋರ್ಟ್ ಸೇವೆ ಇತ್ತೀಚಿನ ಸೇರ್ಪಡೆ. ಈ ಮೊಬೈಲ್ ಆಪ್ನ ನೆರವಿನಿಂದ ನೀವು ಹೊಸ ಪಾಸ್ಪೋರ್ಟ್ಗೆ ಅರ್ಜಿ ಸಲ್ಲಿಸಬಹುದು. ನೀವು ಆಪ್ನಲ್ಲಿ ನೀಡಿದ ವಿಳಾಸದಲ್ಲಿ ಪೊಲೀಸ್ ತಪಾಸಣೆ ನಡೆಯಲಿದೆ. ನಿಮ್ಮ ಅರ್ಜಿ ಮತ್ತು ದಾಖಲೆಗಳು ಸಮರ್ಪಕವಿದ್ದಲ್ಲಿ ನೀವು ನೀಡಿದ ವಿಳಾಸಕ್ಕೆ ಪಾಸ್ಪೋರ್ಟ್ ಅಂಚೆ ಮೂಲಕ ತಲುಪಲಿದೆ.

ನೀವು ಮಾಡಬೇಕಾದ್ದು ಇಷ್ಟು 

1. ನಿಮ್ಮ ಆಂಡ್ರಾಯ್ಡ್ ಮೊಬೈಲ್ನಲ್ಲಿ ಗೂಗಲ್ ಪ್ಲೇ ಸ್ಟೋರ್ ತೆರೆಯಿರಿ
2. ಎಂಪಾಸ್ಪೋರ್ಟ್ ಸೇವಾ ಅಂತ ಟೈಪ್ ಮಾಡಿ, ಸರ್ಚ್ ಮಾಡಿ
3. ಸರ್ಚ್‌ನಲ್ಲಿ ಹಲವು ಆಪ್‌ಗಳು ಕಾಣಿಸಬಹುದು. ಸಿಪಿವಿ ಡಿವಿಷನ್‌ನ ಆಪ್ ಮಾತ್ರ ಅಧಿಕೃತ. 2.2 ಎಂಬಿ ಗಾತ್ರದ ಆಪ್ ಅನ್ನು ಡೌನ್ಲೋಡ್ ಮಾಡಿಕೊಳ್ಳಿ.

4. ಆಪ್ ತೆರೆದಾಗ ಈ ಸ್ಕ್ರೀನ್ ಕಾಣಿಸುತ್ತದೆ.
5. ಬಳಿಕ ಗ್ರಾಹಕರ ನೋಂದಣಿಯ ಫಾರ್ಮ್ ಕಾಣಿಸುತ್ತದೆ. ಅಲ್ಲಿ ಪಾಸ್ಪೋರ್ಟ್ ಕಚೇರಿ (ಈಗಿನ ವಿಳಾಸಕ್ಕೆ ತಕ್ಕಂತೆ), ಹೆಸರು, ಜನ್ಮದಿನಾಂಕ, ಇಮೇಲ್ ವಿಳಾಸ ಇತ್ಯಾದಿ ಅಗತ್ಯ ದತ್ತಾಂಶಗಳನ್ನು ನೀಡಿ.

 6. ಒಮ್ಮೆ ನೋಂದಣಿಯಾದ ಮೇಲೆ ಲಭ್ಯವಿರುವ ಸೇವೆಗಳ ಪಟ್ಟಿ ಕಾಣಿಸುತ್ತದೆ.

7. ಮುಖ್ಯ ಸ್ಕ್ರೀನಲ್ಲಿ ‘ಅಪ್ಲೈ ಫಾರ್ ಪಾಸ್ಪೋರ್ಟ್’ ನಮೂನೆ ಕಾಣಿಸುತ್ತದೆ. ಅಲ್ಲಿ ಅಗತ್ಯ ಮಾಹಿತಿಗಳನ್ನು ತುಂಬಿ ಅರ್ಜಿ ಸಲ್ಲಿಸಿ.

ದಾಖಲೆ ಪರಿಶೀಲನೆ, ಪೊಲೀಸ್ ವೇರಿಫಿಕೇಶನ್ ಇತ್ಯಾದಿ ಪ್ರಕ್ರಿಯೆಗಳು ಪೂರ್ಣವಾಗಿ ಪಾಸ್‌ಪೋರ್ಟ್‌ ನಿಮ್ಮ ಕೈಸೇರಲು ಸುಮಾರು ಒಂದೂವರೆ ತಿಂಗಳು ಅವಧಿ ತಗಲಬಹುದು. ತತ್ಕಾಲ್ ಯೋಜನೆಯಡಿ  ಮೂರ್ನಾಲ್ಕು ದಿನಗಳಲ್ಲಿ ಪಾಸ್‌ಪೋರ್ಟ್‌ ಸಿಗುತ್ತದೆ.

No comments:

Post a Comment