ಎರಡು ಹಿನ್ನಡೆಗಳು ಮತ್ತು ಬೆತ್ತಲಾದ ಭಾಜಪಾ ಮಂದಿ!


ದೇಶದ ಪ್ರಗತಿ ಹೇಗಿದೆ ಅಂತ ನೋಡೋದಕ್ಕೆ ವಿವಿಧ ಮಾನದಂಡಗಳಿವೆ. ಸಮೀಕ್ಷೆ ಕೂಡ ಅವುಗಳ ಪೈಕಿ ಒಂದು ವಿಧಾನ. ಸರ್ಕಾರದ ಕಾರ್ಯಶೈಲಿ ಕುರಿತ ಒಂದು ಸಮೀಕ್ಷೆ ಇತ್ತೀಚೆಗೆ ಪ್ರಕಟವಾಯ್ತು. ಮಹಿಳಾ ಸುರಕ್ಷತೆಗೆ ಸಂಬಂಧಿಸಿ ವಿಶ್ವದಲ್ಲೇ ಅತ್ಯಂತ ಕಳಪೆ ರಾಷ್ಟ್ರ ಭಾರತ ಎಂಬುದು ಆ ಸಮೀಕ್ಷೆಯ ಸಾರ.

ಸಹಜವಾಗಿ ಇಂಥದ್ದಕ್ಕೆ ಕಾಯುತ್ತಿರುವ ವಿಪಕ್ಷದ ನಾಯಕರು, ಬೆಂಬಲಿಗರು ಇದನ್ನಿಟ್ಟುಕೊಂಡು ಮೋದಿ ಸರ್ಕಾರದ ವಿರುದ್ಧ ಅಸ್ತ್ರ ಝಳಪಿಸೋದಕ್ಕೆ ಶುರು ಮಾಡಿದರು. ಇಂಥ ಸಂದರ್ಭಗಳಲ್ಲಿ ಭಾಜಪಾ ಬೆಂಬಲಿಗರು ‘ಕಾಂಗ್ರೆಸ್ ಕಾಲದಲ್ಲಿ ಹೇಗಿತ್ತು?’ ಅನ್ನುವ ಗುರಾಣಿ ಹಿಡಿದುಕೊಂಡು ಕಣಕ್ಕಿಳೀತಾರೆ. ಆದ್ರೆ ಈ ಸಲ ಆ ಗುರಾಣಿಗೆ ಅವಕಾಶವೇ ಇರಲಿಲ್ಲ! ಯಾಕಂದ್ರೆ 2011ರ ಸಮೀಕ್ಷೆಯಲ್ಲಿ ಮಹಿಳಾ ಸುರಕ್ಷೆಗೆ ಸಂಬಂಧಿಸಿ ಅತಿ ಕೆಟ್ಟ ದೇಶಗಳ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದ್ದ ಭಾರತ ಈಗ 1ನೇ ಸ್ಥಾನಕ್ಕೇರಿದೆ.

ಹಾಗಾಗಿ ಭಾಜಪಾ ಬೆಂಬಲಿಗರು ದೇಶಭಕ್ತಿಯ ಗುರಾಣಿ ಹಿಡಿದರು! ಈ ಸಮೀಕ್ಷೆ ಮಾಡಿರೋ ಥಾಮ್ಸನ್ ರಾಯ್ಟರ್ಸ್ ಸಂಸ್ಥೆ ಭಾರತದ ಹೆಸರು ಹಾಳು ಮಾಡೋಕೆ ಸದಾ ಪ್ರಯತ್ನಿಸುತ್ತೆ. ಅದೂ ಅಲ್ಲದೆ ಕೇವಲ 548 ಮಂದಿಯ ಅಭಿಪ್ರಾಯ ಪಡೆದು ಮಾಡಿರೋ ಇದೂ ಒಂದು ಸಮೀಕ್ಷೆಯಾ? ಇದನ್ನಿಟ್ಟುಕೊಂಡು ದೇಶದ ಬಗ್ಗೆ ಪ್ರಶ್ನೆ ಎತ್ತೋರು ದೇಶದ್ರೋಹಗಳು ಅಂತೆಲ್ಲ ಹಲುಬೋಕೆ ಶುರು ಮಾಡಿದ್ರು.

ಆದ್ರೆ ಅವರು ಮರೆತಿದ್ದ ಸಂಗತಿ ಅಂದ್ರೆ ಖುದ್ದು ನರೇಂದ್ರ ಮೋದಿ ಸೇರಿದಂತೆ ಭಾಜಪಾ ಬೆಂಬಲಿಗರು ಇದೇ ಸಮೀಕ್ಷೆಯನ್ನಿಟ್ಟುಕೊಂಡು ಹಿಂದಿನ ಸರ್ಕಾರವನ್ನ, ದೇಶವನ್ನ ಹಳಿಯುವ ಕೆಲಸ ಅತ್ಯಂತ ಸಂತೋಷದಿಂದ ಮಾಡಿದ್ದರು. ಅದನ್ನಿಟ್ಟುಕೊಂಡು ನೆಟ್ಟಿಗರು ‘ಆಗ ಎಲ್ಲಿ ಅಡಗಿತ್ತು ನಿಮ್ಮ ದೇಶಾಭಿಮಾನ?’ ಅಂತ ಸರಿಯಾಗಿ ಬೆಂಡೆತ್ತಿದರು!
 .....
.....
.....
.....
***** 
ಇದೇ ರೀತಿಯ ಇನ್ನೊಂದು ಹಿನ್ನಡೆಯಾಗಿದ್ದು ಡಾಲರ್ನೆದುರು ರೂಪಾಯಿ ಮೌಲ್ಯದ ಕುಸಿತದಲ್ಲಿ. 2013ರಲ್ಲಿ ರೂಪಾಯಿ ಮೌಲ್ಯ 60 ರೂ.ಗೆ ಬಂದಿದ್ದಾಗ ಬಿಜೆಪಿ ನಾಯಕರು ಮನಮೋಹನ್ರನ್ನು ಅಣಕಿಸಿ ಮಾತಾಡಿದ್ದರು. ಗುರುವಾರ ರೂಪಾಯಿ ಬೆಲೆ ಕಳೆದ 45 ವರ್ಷಗಳಲ್ಲೇ ಅತಿ ಕನಿಷ್ಟ ಮೌಲ್ಯಕ್ಕೆ ಕುಸಿದಿದ್ದು ಡಾಲರ್ಗೆ 69 ರೂ. ಆಗಿದೆ. ಭಾಜಪಾ ನಾಯಕರು ಮತ್ತೊಮ್ಮೆ ಗೇಲಿಗೆ ಒಳಗಾದರು.
.....
.....
.....
.....
.....

No comments:

Post a Comment