![]() |
| ವಿಶ್ವಬ್ಯಾಂಕ್ ವೆಬ್‌ಸೈಟ್ ದತ್ತಾಂಶದ ಸ್ಕ್ರೀನ್‌ಶಾಟ್ |
"70 ವರ್ಷಗಳ ಇತಿಹಾಸದಲ್ಲಿ ಕೇವಲ ಮೂರು ವರ್ಷ ಭಾರತ ವಿಶ್ವಬ್ಯಾಂಕ್ನಿಂದ ಸಾಲ ತಗೊಂಡಿಲ್ಲ. ಅದು ಪ್ರಧಾನಿ ನರೇಂದ್ರ ಮೋದಿಯವರ ಆಡಳಿತದ 2015, 2016 ಮತ್ತು 2017." ಹೀಗಂತ ಇತ್ತೀಚೆಗೆ ಟ್ವೀಟಿಸಿದ್ದಾರೆ ಬಿಜೆಪಿಯ ರಾಷ್ಟ್ರೀಯ ಕಾರ್ಯದರ್ಶಿ ತರುಣ್ ಛುಗ್.
70 साल के इतिहास में सिर्फ 3 साल ऐसे है ,जिसमे भारत ने @WorldBank से एक रूपये का कर्ज नहीं लिया और वो तीन साल है प्रधानमन्त्री श्री @narendramodi जी की सरकार के 2015 -16 , 2016 -17 और 2017 -18— BJP Tarun Chugh (@bjptarunchugh) June 16, 2018
6.5 ಲಕ್ಷ ಕೋಟಿ ರೂಪಾಯಿಗೂ ಅಧಿಕ ಸಾಲ ಮಂಜೂರು
ವಿಶ್ವಬ್ಯಾಂಕ್‌ನ ದತ್ತಾಂಶ ಹೇಳುವಂತೆ 2015ರಿಂದ 2017ರವರೆಗೆ ಭಾರತಕ್ಕೆ ಸುಮಾರು 50 ಯೋಜನೆಗಳಿಗಾಗಿ 96,560 ದಶಲಕ್ಷ ಡಾಲರ್ ಸಾಲ ಮಂಜೂರಾಗಿದೆ. ಆರು ವರ್ಷಗಳ ಅವಧಿಯ ಸ್ಕಿಲ್ ಇಂಡಿಯಾ ಯೋಜನೆಗೆ 3,188 ದಶಲಕ್ಷ ಡಾಲರ್ ಇದರಲ್ಲಿ ಸೇರಿದೆ. 2023ರ ಮಾರ್ಚ್ 31ಕ್ಕೆ ಕೊನೆಯಾಗುವ ಈ ಯೋಜನೆಯ ಸಾಲವನ್ನು ಆ ಹೊತ್ತಿಗೆ ವಿಶ್ವಬ್ಯಾಂಕ್ಗೆ ಮರಳಿಸಬೇಕು. ಇನ್ನು 2015ರಲ್ಲಿ ಅತಿ ದೊಡ್ಡ ಸಾಲ ಸ್ವಚ್ಛ ಭಾರತ ಯೋಜನೆಗೆ ಮಂಜೂರಾಗಿದೆ. ಆದರೆ 1.5 ಶತಕೋಟಿ ಡಾಲರ್ ಸಾಲದ ಈ ಹಣ ಇನ್ನೂ ಭಾರತಕ್ಕೆ ಬಿಡುಗಡೆಯಾಗಿಲ್ಲ. ಏಕೆಂದರೆ ನಿಗದಿತ ಗಡುವಿನೊಳಗೆ ಸ್ವಚ್ಛಭಾರತ ಸಮೀಕ್ಷೆಯನ್ನು ಸರ್ಕಾರ ಪೂರೈಸಿಲ್ಲ.ಕೇಂದ್ರ ಸರ್ಕಾರ ವಿಶ್ವಬ್ಯಾಂಕ್ನಿಂದ ಇತ್ತೀಚೆಗೆ ತೆಗೆದುಕೊಂಡ ಸಾಲ 3,371 ಕೋಟಿ ರೂ.. ಇದನ್ನು ಗ್ರಾಮೀಣ ರಸ್ತೆಗಳ ಅಭಿವೃದ್ಧಿಗಾಗಿನ ಪ್ರಧಾನಮಂತ್ರಿ ಗ್ರಾಮೀಣ ಸಡಕ್ ಯೋಜನೆಗೆ ತೆಗೆದುಕೊಳ್ಳಲಾಗಿದೆ. ಮತ್ತು 2016ರ ವಿಶ್ವಬ್ಯಾಂಕ್ ವರದಿಯ ಪ್ರಕಾರ ಸ್ವಾತಂತ್ರ್ಯಾನಂತರ ಅತಿ ಹೆಚ್ಚು ಸಾಲ ಪಡೆದ ದೇಶಗಳಲ್ಲಿ ಭಾರತವೇ ಮೊದಲ ಸ್ಥಾನದಲ್ಲಿದೆ.


No comments:
Post a Comment