‘ಕುಡುಕ ಕೇಜ್ರಿವಾಲ’ ಅಂತ ಕೇಕೆ ಹಾಕಿ ಕುಣಿದ ಖಾಲಿ ತಲೆ ಭಕ್ತರು!

ದೆಹಲಿ ಎನ್‌ಡಿಎ ಶಾಸಕ ಮಂಜಿಂದರ್ ಸಿಂಗ್ ಸಿರ್ಸಾ ಪ್ರಕಟಿಸಿರುವ ಭಿತ್ತಿಚಿತ್ರ. ಕೇಜ್ರಿವಾಲ್‌ ನೀರು ಕುಡೀತಿರೋ ಚಿತ್ರವನ್ನು ತಿರುಚಲಾಗಿದೆ!

ನರೇಂದ್ರ ಮೋದಿ ಸರ್ಕಾರ ಕೇಂದ್ರದಲ್ಲಿ ಅಸ್ತಿತ್ವಕ್ಕೆ ಬಂದ ನಂತರ ಸೋಷಿಯಲ್ ಮೀಡಿಯಾಗಳಲ್ಲೊಂದು ವಾನರ ಪಡೆ ಅತ್ಯಂತ ಸದ್ದು ಮಾಡುತ್ತಿದೆ. ಮೋದಿ ವಿರೋಧಿಗಳನ್ನು ಯದ್ವಾತದ್ವಾ ಹಣಿಯುವುದನ್ನೇ ಮುಖ್ಯ ಕಸುಬು ಮಾಡಿಕೊಂಡಿರುವ ಈ ಬಳಗಕ್ಕೆ ಸತ್ಯಾಂಶಗಳು ಅಂದರೆ ವಿಪರೀತ ಅಲರ್ಜಿ. ಸುಳ್ಳುಗಳನ್ನು ಹರಡೋದು ಇವರಿಗೆ ಕಜ್ಜಿ ತುರಿಕೆಯಂಥ ವಿಚಿತ್ರ ಖುಷಿ ನೀಡುವ ಹವ್ಯಾಸ! ಈ ಮಂಗಗಳ ಸೇನೆ ಇತ್ತೀಚೆಗೆ ಎಂಥ ಎಡವಟ್ಟುಗಳನ್ನು ಮಾಡಿಕೊಂಡು ಮನರಂಜನೆ ನೀಡ್ತಿದೆ ಅನ್ನೋದಕ್ಕೆ ಇಲ್ಲೊಂದಿಷ್ಟು ನಿದರ್ಶನಗಳಿವೆ.

ಕೇಜ್ರಿವಾಲ್ 80,000 ರೂ. ಮದ್ಯ ಕುಡಿದರಂತೆ! 

ಕರ್ನಾಟಕ ಸಿಎಂ ಎಚ್‌ಡಿ ಕುಮಾರಸ್ವಾಮಿ ಪ್ರಮಾಣವಚನದ ಸಂದರ್ಭ ಕರ್ನಾಟಕಕ್ಕೆ ಹಾಜರಾಗಿದ್ದ ಅನೇಕ ವಿಪಕ್ಷ ನಾಯಕರ ಪೈಕಿ ಆಮ್ ಆದ್ಮಿ ಪಾರ್ಟಿಯ ಮುಖಂಡ ಅರವಿಂದ ಕೇಜ್ರಿವಾಲ್ ಕೂಡ ಒಬ್ಬರು. ಕಾರ್ಯಕ್ರಮ ಮುಗಿದು ತಿಂಗಳ ನಂತರ ಸಾಮಾಜಿಕ ಕಾರ್ಯಕರ್ತ ಬಿ.ಎಸ್. ಗೌಡ ಎಂಬವರು ಸಮಾರಂಭಕ್ಕೆ ಆದ ಖರ್ಚಿನ ಮಾಹಿತಿಯನ್ನು ಆರ್‌ಟಿಐ ಮೂಲಕ ಪಡೆದಿದ್ದರು. ಅದರಲ್ಲಿ ಚಂದ್ರಬಾಬು ನಾಯ್ಡು ಸುಮಾರು 8.7 ಲಕ್ಷ ರೂ. ಹಾಗೂ ಅರವಿಂದ ಕೇಜ್ರಿವಾಲ್ ಸುಮಾರು 1.8 ಲಕ್ಷ ರೂ. ವೆಚ್ಚ ಮಾಡಿದ್ದಾರೆ ಎಂಬ ಮಾಹಿತಿ ನೀಡಲಾಗಿತ್ತು.

ಕೇಜ್ರಿವಾಲ್ 80,000 ರೂ. ಮದ್ಯ ಕುಡಿದು ಮೋಜು ಮಾಡಿದರು ಅಂತ ಬಿಜೆಪಿ ಭಕ್ತ ಪಡೆ ಮೀಮ್‌ಗಳನ್ನು ಸಾಮಾಜಿಕ ತಾಣದಲ್ಲಿ ಹರಡುತ್ತಿದೆ. ಆದರೆ ಅಸಲಿಗೆ ತಾಜ್‌ ವೆಸ್ಟ್‌ ಎಂಡ್‌ ಹೋಟೆಲ್‌ ಬಿಲ್‌ನಲ್ಲಿ ಆಲ್ಕೋಹಾಲ್‌ನ ಪ್ರಸ್ತಾಪವೇ ಇಲ್ಲ!

ತಾಜ್ ವೆಸ್ಟ್ ಎಂಡ್ ಹೋಟೆಲ್ ನೀಡಿದ್ದ ಬಿಲ್‌ನಲ್ಲಿ ಏರೇಟೆಡ್ ಬೆವರೇಜಸ್ ಅನ್ನೋ ಕೆಟಗರಿಯಲ್ಲಿ 6,750 ರೂ. ಬಿಲ್ ಮಾಡಲಾಗಿದೆ. ಇದಲ್ಲದೆ ಫುಡ್/ ಜ್ಯೂಸಸ್ ಕೆಟಗರಿಯಲ್ಲಿ ಸುಮಾರು 80,000 ರೂ. ಬಿಲ್ ಮಾಡಲಾಗಿದೆ. ಇದರ ಹೊರತಾಗಿ ದಿನಕ್ಕೆ 32,000 ರೂ.ನಂತೆ ಎರಡು ದಿನಕ್ಕೆ 64,000 ರೂ. ಹೋಟೆಲ್ ರೂಂ ಬಾಡಿಗೆಯನ್ನು ಬಿಲ್‌ನಲ್ಲಿ ನಮೂದಿಸಲಾಗಿದೆ. ಜ್ಯೂಸಸ್ ಅಂದರೆ ಹಣ್ಣಿನ ರಸ, ಬೆವರೇಜಸ್ ಅಂದರೆ ಪೆಪ್ಸಿ, ಕೋಕಾ ಕೋಲಾದಂಥ ಪಾನೀಯಗಳು ಎಂಬುದು ಸ್ಪಷ್ಟವಾಗಿದ್ದರೂ ಖಾಲಿ ತಲೆಯ ಭಕ್ತಪಡೆಗೆ ಅರ್ಥವಾಗಿಲ್ಲ ಅಥವಾ ಅರ್ಥವಾಗಿದ್ದರೂ ತಮ್ಮ ಪ್ರೊಪಗಂಡಾಗೆ ಅಡ್ಡಿಯಾಗುತ್ತದೆ ಎಂಬ ಕಾರಣಕ್ಕೆ ಕುರುಡರಾಗಿದ್ದಾರೆ!

ಮದ್ಯ ಸೇವನೆ ಮಾಡಿಯೇ ಇಲ್ಲ! 

ಒಂದೆರಡು ದಿನಗಳಿಂದ #ಕುಡುಕಕೇಜ್ರಿವಾಲ್ ಅನ್ನೋ ಹ್ಯಾಷ್‌ಟ್ಯಾಗ್‌ನಡಿ ಬಾಲ ಇಲ್ಲದ ಆದಿಮಾನವ ಪಡೆ ವಿಧವಿಧದ ಮೀಮ್‌ಗಳನ್ನು ಮಾಡಿ ಪ್ರಕಟಿಸುತ್ತಲೇ ಇದೆ. ಮಾಜಿ ಸಚಿವೆ ಶೋಭಾ ಕರಂದ್ಲಾಜೆಯಂಥ ಬಿಜೆಪಿ ನಾಯಕಿಯರೂ ಈ ಬಗ್ಗೆ ಟ್ವೀಟು ಮಾಡಿರುವುದೂ ಮತ್ತು ಸುರೇಶ್‌ಕುಮಾರ್‌ರಂಥ ಸಭ್ಯ ಹಾಗೂ ವಿವೇಕವಂತ ಎನಿಸಿಕೊಂಡಿರುವ ಶಾಸಕರು ಅದನ್ನು ರೀಟ್ವೀಟು ಮಾಡಿರುವುದು ಸದ್ಯದ ಬಿಜೆಪಿ ಸ್ಥಿತಿ ಬಲ್ಲವರಿಗೆ ಆಶ್ಚರ್ಯವನ್ನೇನೂ ಉಂಟುಮಾಡಲಿಕ್ಕಿಲ್ಲ.
ಬೆವರೇಜಸ್ ಎಂಬ ತಂಪುಪಾನೀಯದ 7,000 ರೂ. ಮೊತ್ತವನ್ನು 80,000 ರೂ.ಗೆ ಏರಿಸಿಕೊಂಡು ಇವರೆಲ್ಲ ಕುಡುಕ ಕೇಜ್ರಿವಾಲ ಅಂತ ಮೀಮ್‌ಗಳನ್ನು ಮಾಡುತ್ತ ಖುಷಿ ಪಡುತ್ತಿದ್ದಾರೆ. ಆದರೆ ಅಸಲಿಗೆ ಕೇಜ್ರಿವಾಲ್ ತಾಜ್ ವೆಸ್ಟ್ಎಂಡ್‌ನಲ್ಲಿ ಮದ್ಯ ಸೇವಿಸಿಯೇ ಇಲ್ಲ! ಇದಕ್ಕೆ ಆ ಹೊಟೇಲ್ ನೀಡಿರುವ ಬಿಲ್ ಸಾಕ್ಷಿಯಾಗಿದೆ. ಮೊದಲನೇದಾಗಿ ಪೆಟ್ರೋಲ್‌ನ ರೀತಿ ಆಲ್ಕೋಹಾಲ್ ಕೂಡ ಜಿಎಸ್ಟಿ ವ್ಯಾಪ್ತಿಗೆ ಬಂದಿಲ್ಲ. ಬಿಲ್‌ನಲ್ಲಿ ಎಲ್ಲ ಬೆವರೇಜಸ್ಗೂ ಜಿಎಸ್ಟಿ ನಮೂದಿಸಿದ್ದಾರೆ. ಹಾಗಾಗಿ ಅದು ಮದ್ಯರಹಿತ ತಂಪುಪಾನೀಯ ಎಂಬುದು ಸ್ಪಷ್ಟ.
ಫುಡ್‌ ಆಂಡ್ ಬೆವರೇಜಸ್‌ಗೆ ಜಿಎಸ್‌ಟಿ ಹಾಕಲಾಗಿದೆ. ಮದ್ಯ ಜಿಎಸ್‌ಟಿ ವ್ಯಾಪ್ತಿಯಲ್ಲಿಲ್ಲ ಎಂಬುದನ್ನು ಭಕ್ತಪಡೆ ಮರೆತಿದೆ!

ಇನ್ನು ಬಿಲ್‌ನ ಎರಡನೇ ಪುಟದಲ್ಲಿ ಮದ್ಯ, ಲಾಂಡ್ರಿ ಹೊರತುಪಡಿಸಿ ಉಳಿದ ಸಂಪೂರ್ಣ ವೆಚ್ಚ ಸರ್ಕಾರ ಭರಿಸುತ್ತದೆ ಅಂತ ದಪ್ಪಕ್ಷರಗಳಲ್ಲಿ ನಮೂದಿಸಲಾಗಿದೆ. ಕೇಜ್ರಿವಾಲರ ವಾಸ್ತವ್ಯ ಮತ್ತು ಊಟದ ಖರ್ಚು ಅಂತ ಸರ್ಕಾರಕ್ಕೆ 1.85 ಲಕ್ಷ ರೂ. ಬಿಲ್ ನೀಡಲಾಗಿದೆ. ಅಂದರೆ ಇದರಲ್ಲಿ ಮದ್ಯ ಅಥವಾ ಆಲ್ಕೋಹಾಲ್‌ನ ಖರ್ಚು ಸೇರಿಲ್ಲ!
ಮದ್ಯ, ಲಾಂಡ್ರಿ ಹೊರತುಪಡಿಸಿ ಕರ್ನಾಟಕ ಸರ್ಕಾರ ಭರಿಸಿರುವ ಬಿಲ್‌ ಇದು. ಅಂದರೆ ಇದರಲ್ಲಿರೋದು ಮದ್ಯದ ಖರ್ಚಲ್ಲ!

*****

ಸ್ವರಾ ಹಿಂದೆ ಬಿದ್ದ ಟೀಶರ್ಟ್ ಪ್ರೇಮಿಗಳು! 

ಇದೇ ರೀತಿಯ ಇನ್ನೊಂದು ಪ್ರಕರಣ ನಟಿ ಸ್ವರಾ ಭಾಸ್ಕರ್‌ರದ್ದು. ಇತ್ತೀಚೆಗೆ ನಟಿ ಕಂಗನಾ ರಣಾವತ್ ಜತೆ ಸುದ್ದಿಗೋಷ್ಟಿ ನಡೆಸಿದ್ದ ಜಗ್ಗಿ ವಾಸುದೇವ್, “ಗೋರಕ್ಷಣೆ ಹೆಸರಿನಲ್ಲಿ ನಡೆಯುವ ಹಲ್ಲೆಗಳು ಗ್ರಾಮೀಣ ಭಾರತದ ಸಹಜ ಚಟುವಟಿಕೆಗಳು. ಅದನ್ನು ಉದಾರವಾದಿಗಳು ಮತಾಂಧತೆ ಎಂಬಂತೆ ಬಿಂಬಿಸುತ್ತಿದ್ದಾರೆ..” ಎಂಬರ್ಥದ ಮಾತು ಹೇಳಿದ್ದರು.

ಅದಕ್ಕೆ ಪ್ರತಿಕ್ರಿಯೆಯಾಗಿ ''ಜಾತಿ ಅಮಲಿನ ಕೆಲ ಮೂಢರು ಅಮಾಯಕರನ್ನು ಜೀಪಿಗೆ ಕಟ್ಟಿ ಥಳಿಸಿದರು. ಮತ್ತು ಚಿತ್ರೀಕರಿಸಿದರು. ಆದರೆ ಉದಾರವಾದಿಗಳೇ ಮತಾಂಧರು ಅಂತಾರೆ ಸದ್ಗುರು” ಅಂತ ನಟಿ ಸ್ವರಾ ಟ್ವೀಟಿಸಿದ್ದರು.
ಹಿಂದೆ ಯಾವುದೋ ಸಂದರ್ಭದಲ್ಲಿ ನಟಿ ಸ್ವರಾ ಭಾಸ್ಕರ್, ಕೇಂದ್ರ ಸರ್ಕಾರ ವಿರೋಧಿ ಹೇಳಿಕೆ ನೀಡಿದ್ದರಿಂದ ಸಿಟ್ಟಿನಿಂದ ಮೈ ಎಲ್ಲ ಕೆರೆದುಕೊಂಡು ಕಜ್ಜಿ ಮಾಡಿಕೊಂಡಿದ್ದ ಭಕ್ತ ಪಡೆ ಈಗ ಆ ಕಜ್ಜಿ ತುರಿಸಿಕೊಳ್ಳುವ ಕೆಲಸ ಶುರುಹಚ್ಚಿಕೊಂಡಿತು. 'ಜೀಪಿಗೆ ಕಟ್ಟಿಹಾಕಿ..' ಎಂಬ ಪದವನ್ನಷ್ಟೇ ನೋಡಿ ಇದು ಕಾಶ್ಮೀರದ ಘಟನೆ. ಇಲ್ಲಿ ಸ್ವರಾ ಸೇನೆಗೆ ಅವಮಾನ ಮಾಡಿದ್ದಾಳೆ ಅಂತ ತಾವೇ ನಿರ್ಧರಿಸಿ ವಿವಿಧ ಪೋಸ್ಟ್‌ಗಳನ್ನು ಸಾಮಾಜಿಕ ತಾಣಗಳಲ್ಲಿ ಹಾಕಿದರು.
''ಐವತ್ತು ರೂಪಾಯಿ ಟೀ ಶರ್ಟು ಹಾಕಿಕೊಂಡು ದೇಶಪ್ರೇಮ ತೋರಿಸ್ತೀರಲ್ಲ, ನಟಿ ಸ್ವರಾ ಸೈನಿಕರ ವಿಷಯ ಮಾತಾಡಿಯೇ ಇಲ್ಲ. ಇಷ್ಟಕ್ಕೂ ಆಕೆಯ ಅಪ್ಪ ಖುದ್ದು ನೇವಿಯಲ್ಲಿ ಸೇನಾಕಮಾಂಡರ್ ಆಗಿದ್ದವರು'' ಅಂತ ವಿಷಯ ಅರ್ಥ ಮಾಡಿಸುವ ಪ್ರಯತ್ನ ಹಲವರು ಮಾಡಿದರೂ ಖಾಲಿ ತಲೆ ಭಕ್ತರಿಗೆ ಅದು ಅರ್ಥವಾಗಲೇ ಇಲ್ಲ!
*****

ಮುಸ್ಲೀಮರು ಭಾರತದ ಸ್ವಾತಂತ್ರ್ಯಕ್ಕೆ ಸಂಭ್ರಮಿಸಿದರೂ ತಪ್ಪೇ! 

ಇನ್ನೊಂದು ಘಟನೆ ಸ್ವಾತಂತೋತ್ಸವಕ್ಕೆ ಸಂಬಂಧಿಸಿದ್ದು. ''ಜಶ್ನ್ ಎ ಆಜಾದಿ, ಆಗಸ್ಟ್ 14ರ ಸಂಜೆ'' ಎಂಬ ಭಿತ್ತಿಫಲಕವನ್ನ ನೋಡಿದ ಭಕ್ತಪಡೆಯ ಒಬ್ಬಾಕೆ “ಎಂಥ ದೇಶದ್ರೋಹಿಗಳು ಇವರು. ಪಾಕಿಸ್ತಾನವನ್ನು ಬೆಂಬಲಿಸುತ್ತಿದ್ದಾರೆ” ಎಂಬರ್ಥದಲ್ಲಿ ಪ್ರತಿಕ್ರಿಯಿಸಿದಳು.
ಅಸಲಿಗೆ ಆ ಭಿತ್ತಿಫಲಕದಲ್ಲಿ ಭಾರತದ ತ್ರಿವರ್ಣಧ್ವಜವಿದ್ದುದಾಗಲೀ, ಭಾರತದ ಸ್ವಾತಂತ್ರ್ಯದ ಸಂಭ್ರಮಕ್ಕೆ ಅನ್ನುವ ಬರಹವಾಗಲಿ, ಸ್ವಾತಂತ್ರ್ಯೋತ್ಸವದ ಮುನ್ನಾ ದಿನ ಉತ್ತರಭಾರತದ ಹಲವೆಡೆ ಸಂಜೆ ಕವಿಗೋಷ್ಠಿ ನಡೆಸುವ ಸಂಪ್ರದಾಯ ಇರುವುದಾಗಲೀ ಖಾಲಿ ತಲೆ ಪಡೆಗೆ ಕಾಣಿಸಿಲ್ಲ . ಅವರ ಮನಸ್ಸಿನಲ್ಲಿರುವುದು ಮುದ್ರೆಯೊತ್ತಿರುವುದು ಒಂದೇ; ಮುಸ್ಲೀಮರು ಪಾಕಿಸ್ತಾನದ ಬೆಂಬಲಿಗರು ಎಂಬ ಬಿತ್ತಲ್ಪಟ್ಟ ವಿಷ; ಆ ಕಾರಣಕ್ಕೆ ಮುಸ್ಲಿಮರು ಭಾರತದ ಸ್ವಾತಂತ್ರ್ಯೋತ್ಸವ ಆಚರಿಸಿದರೂ ಇವರಿಗೆ ದೇಶದ್ರೋಹಿಗಳಂತೆ ಕಾಣಿಸುತ್ತಾರೆ!

No comments:

Post a Comment