![]() |
ಮುಂಬೈನ ಮಿನಿ ಪಂಜಾಬ್ಸ್ ಲೇಕ್‌ಸೈಡ್ ರೆಸ್ಟೊರೆಂಟ್‌ನಲ್ಲಿ ಸಿಗುವ ದಾರಾ ಸಿಂಗ್ ಥಾಲಿ. |
ಹೊಟ್ಟೆಗೆ ಇದೊಂಥರಾ ಬಕಾಸುರ ಟ್ರೀಟು; ಮುಂಬೈನಲ್ಲಿರೋ ಮಿನಿ ಪಂಜಾಬ್ಸ್ ಲೇಕ್‌ಸೈಡ್ ರೆಸ್ಟೊರೆಂಟ್ನಲ್ಲಿ ಈ ದೊಡ್ಡ ತಟ್ಟೆಯ ಊಟ ಸಿಗುತ್ತೆ. ಹೆಸರು ದಾರಾಸಿಂಗ್ ಥಾಲಿ ಅಂತ. ವಿವಿಧ ರೋಟಿ, ಬಿರಿಯಾನಿ, ಸಿಹಿ-ಖಾರ ಇತ್ಯಾದಿಗಳು ಸೇರಿ ಒಂದೇ ತಟ್ಟೆಯಲ್ಲಿ ಒಟ್ಟು 36 ಬಗೆಯ ಖಾದ್ಯಗಳಿರ್ತವೆ. ವೆಜ್ಜು, ನಾನ್‌ವೆಜ್ಜು ಎರಡಕ್ಕೂ ಡಿಫರೆಂಟು ಮೆನು. ಎಲ್ಲ ವೆರೈಟಿಗಳನ್ನು ಒಪ್ಪವಾಗಿ ಇರಿಸಿದ ಮೇಲೆ ಈ ತಟ್ಟೆಯನ್ನು ಇಬ್ಬರು ವೇಟರ್‌ಗಳು ಹಿಡಿದು ತರುತ್ತಾರೆ. ಕನಿಷ್ಟ ನಾಕು ಮಂದಿಯ ಹೊಟ್ಟೆ ತುಂಬಿಸುವ ಮೆಗಾ ಫುಲ್ ಮೀಲ್ಸ್ ಇದು. ಈ ಊಟದ ಬೆಲೆ ಜಿಎಸ್ಟಿ ಸೇರಿ 1200 ರೂ.
ಅಂದಂಗೆ ರೆಸ್ಟೊರೆಂಟ್ನಲ್ಲಿ ಗ್ರಾಹಕರಿಗೆ ಒಂದು ಆಫರ್ ಕೂಡ ಇದೆ. ಒಬ್ಬರೇ ಕೂತು ಇದನ್ನು ಪೂರ್ತಿ ತಿಂದರೆ (ಒಂದು ಐಟಮ್ ಕೂಡ ಬಿಡದ ಹಾಗೆ) ಊಟ ಉಚಿತ! ಆದ್ರೆ ಈವರೆಗೆ ಯಾರೂ ಈ ಆಫರ್ ಎನ್‌ಕ್ಯಾಶ್ ಮಾಡಿಕೊಂಡಿಲ್ಲ ಅನ್ನೋದು ರೆಸ್ಟೊರೆಂಟ್ ಮಾಲೀಕರ ಹೇಳಿಕೆ.

No comments:
Post a Comment