ಜನಕ್ಕೆ ಜೇಟ್ಲಿ ಪಕೋಡ, ರಾಜಸ್ಥಾನದಲ್ಲಿ ಕುಸಿದ ಬಿಜೆಪಿ ಘೋಡಾ!


ಬಹಳ ಮಟ್ಟಿಗೆ ಚರ್ಚೆಯಲ್ಲಿದ್ದದ್ದು ಬಜೆಟ್‌ನ ವಿಷಯ. ಬಿಜೆಪಿ ಬೆಂಬಲಿಗರು ಬೆಳಗ್ಗೆಯಿಂದಲೇ #newindiabudget ಅನ್ನೋ ಹ್ಯಾಶ್‌ಟ್ಯಾಗ್‌ ರೆಡಿ ಮಾಡಿಕೊಂಡು ಸಿದ್ಧರಾಗಿ ಕೂತಿದ್ದರು. ಆದರೆ ಸಂಜೆಯಾಗುವ ಹೊತ್ತಿಗೆ #AntiMiddleClassBudget ಅನ್ನೋ ಹ್ಯಾಶ್‌ಟ್ಯಾಗು ಮೊದಲ ಸ್ಥಾನಕ್ಕೆ ಏರಿತ್ತು. ಪೆಟ್ರೋಲ್‌ನ ಅಬಕಾರಿ ಸುಂಕ 2 ರೂ. ಹಾಗೂ ಹೆಚ್ಚುವರಿ ತೆರಿಗೆಯನ್ನು 6 ರೂ. ಇಳಿಸಿದ ಜೇಟ್ಲಿ, ಹೊಸ ರಸ್ತೆ ಸುಂಕವನ್ನು 8 ರೂ.ಗೆ ಏರಿಸುವ ಮೂಲಕ ಜನರನ್ನ ಮಂಗ ಮಾಡಿದ್ದಾರೆ ಅಂತ @Sachinmethre2 ಗಮನಕ್ಕೆ ತಂದರು.
10 ಲಕ್ಷ ರೂ.ಗಿಂತ ಹೆಚ್ಚು ವಾರ್ಷಿಕ ವರಮಾನ ಇರುವವರು ಕಟ್ಟಬೇಕಾದ ತೆರಿಗೆ ಮತ್ತಷ್ಟು ಹೆಚ್ಚಲಿದೆ ಅಂದಿದ್ದು @sahiljoshii
ವಿರೋಧ ಪಕ್ಷದಲ್ಲಿದ್ದಾಗ ತೆರಿಗೆ ಮಿತಿಯನ್ನು ಏರಿಸಿ ಅಂತ ಬೊಬ್ಬೆ ಹಾಕುತ್ತಿದ್ದ ಜೇಟ್ಲಿ, ತಾವೇ ವಿತ್ತ ಸಚಿವರಾಗಿರುವಾಗ ಆ ಬಗ್ಗೆ ಸೊಲ್ಲೇ ಎತ್ತುತ್ತಿಲ್ಲ ಅಂತ @tarletaata ವ್ಯಂಗ್ಯವಾಗಿ ಕುಟುಕಿದರು.
ಇದರ ಮಧ್ಯೆ, ಈ ಬಾರಿ ಬಜೆಟ್ ಭಾಷಣವನ್ನು ಅರುಣ್ ಜೇಟ್ಲಿ ಇಂಗ್ಲೀಷ್ನ ಬದಲಾಗಿ ಹಿಂದಿಯಲ್ಲಿ ಓದಿದ್ದಕ್ಕೂ ವಿರೋಧ ವ್ಯಕ್ತವಾಯ್ತು. @sumanthraman ಇದು ದಕ್ಷಿಣ ಭಾರತವನ್ನು ಕಡೆಗಣಿಸುವ ಹುನ್ನಾರದ ಮುಂದುವರಿಕೆ ಅಂತ ಆರೋಪಿಸಿದ್ರು.
ಬಜೆಟ್ ಗಲಾಟೆ ಮಧ್ಯೆ ಬಹುತೇಕ ಕಳೆದುಹೋಗಿದ್ದು ರಾಜಸ್ಥಾನ ಉಪಚುನಾವಣೆ ಫಲಿತಾಂಶದ ಸುದ್ದಿ. ಇದೇ ಮೊದಲ ಬಾರಿಗೆ ಆಡಳಿತದಲ್ಲಿರುವ ಬಿಜೆಪಿ ಮೂರೂ ಸ್ಥಾನಗಳಲ್ಲಿ ಸೋಲು ಕಂಡಿದ್ದು ಸಹಜವಾಗಿ ಕಾಂಗ್ರೆಸ್ಸಿಗರ ಹುಮ್ಮಸ್ಸು ಹೆಚ್ಚಿಸಿತ್ತು. ಆದರೆ ಇಂಟರೆಸ್ಟಿಂಗ್ ಸಂಗತಿ ಇಲ್ಲಿದೆ ನೋಡಿ; ರಾಜಸ್ಥಾನದಲ್ಲಿ ಬಿಜೆಪಿ ಸೋಲಿಗೆ ಪದ್ಮಾವತಿ ಬ್ಯಾನ್ ಮಾಡದಿರುವುದೇ ಕಾರಣ. ಮುಂದಿನ ಚುನಾವಣೆಯೊಳಗೆ ಬ್ಯಾನ್ ಮಾಡಿ. ಅದೊಂದೇ ಮಾರ್ಗ ಅಂತ ಸೊಲ್ಯೂಷನ್ನು ಕೊಟ್ಟಿದ್ದಾರೆ ಕರ್ಣಿ ಸೇನಾ ಮುಖ್ಯಸ್ಥ 😂

No comments:

Post a Comment