ಉಡುಪಿ ಕೃಷ್ಣ ದೇಗುಲದೆದುರು ಫಾರಿನರ್ ಬುಕ್ ಸೆಲ್ಲರ್!


ಉಡುಪಿ ಕೃಷ್ಣನನ್ನು ನೋಡೋಕೆ ಈಷ್ಟೂದ್ದ ಸಾಲು.. ಕಬ್ಬಿಣದ ರಾಡುಗಳ ಚೌಕಟ್ಟಿನೊಳಗೆ ನಿಂತಿದ್ದ ಭಕ್ತರ ಮುಂದೆ ಈತ ಕೈಯಲ್ಲೊಂದಿಷ್ಟು ಪುಸ್ತಕ ಹಿಡ್ಕೊಂಡು ಅನೌನ್ಸು ಮಾಡ್ತಾ ಇದ್ದಕ್ಕಿದ್ದ ಹಾಗೆ ಬಂದ.

“ಬನ್ನಿಬನ್ನಿ.. ಕನ್ನಡ ಬುಕ್ಸ್ ಇಂಗ್ಲೀಷ್ ಬುಕ್ಸ್ ಹಿಂದಿ ಬುಕ್ಸ್.. ಒಳ್ಳೆಒಳ್ಳೆ ಬುಕ್ಸ್.. ತಗೊಳಿ..”

ತಿಳಿಗೆಂಪಿನ ಮೈ ಚರ್ಮ, ಫಾರಿನರು ಅನ್ನೋದು ಕನ್ಫರ್ಮು! ಕನ್ನಡದಲ್ಲಿ ಅನೌನ್ಸು ಮಾಡ್ತಾ ಇಲ್ಯಾಕೆ ಕನ್ನಡ, ಹಿಂದಿ ಪುಸ್ತಕ ಮಾರ್ತಿದಾನೆ? ಕುತೂಹಲ ತಣಿಸಿಕೊಳ್ಳೋಕೆ ನನ್ನ ಹರಕುಮುರಕು ಇಂಗ್ಲೀಷಿನಲ್ಲಿ ಮಾತಿಗಿಳಿದೆ.

- ಫ್ರಮ್ ವಿಚ್ ಕಂಟ್ರಿ ಯೂ ಆರ್?
ರಷಿಯಾ

- ವಾಟ್ ಇಸ್ ಯುವರ್ ನೇಮ್?
ಲಕ್ಷ್ಮೀಕಾಂತ ದಾಸ್, ಐ ಆಮ್ ಫ್ರಮ್ ಇಸ್ಕಾನ್. 

- ವಾಟ್ ಇಸ್ ದ್ಯಾಟ್ ಅಟ್ರಾಕ್ಟೆಡ್ ಯೂ, ಟುವರ್ಡ್ಸ್ ಇಸ್ಕಾನ್?
ಪೀಸ್.. ಇನ್ನರ್ ಪೀಸ್.. 

ಮುಂದಿನ ಪ್ರಶ್ನೆಗೆ ಅವಕಾಶ ನೀಡದೆ ಮತ್ತೆ ಪುಸ್ತಕ ಮುಂದೊಡ್ಡಿದ.

"ತಗೊಳ್ಳಿ.. ಒಳ್ಳೆಒಳ್ಳೆ ಬುಕ್ಸ್.. ಕನ್ನಡ ಬುಕ್ಸ್.."

ಚಾಚಿದ್ದ ಕೈಗಳತ್ತ ಕಣ್ಣು ಹಾಯಿಸಿದ್ರೆ ರಾಜವಿದ್ಯೆ, ಭಗವತ್ ಸಂದೇಶ, ನೈಸರ್ಗಿಕ ನ್ಯಾಯ, ಲಾಸ್ ಆಫ್ ನೇಚರ್ ಇತ್ಯಾದಿ ಮುಖಪುಟಗಳು. ಮತ್ತೊಂದು ರಟ್ಟೆ ಗಾತ್ರದ ಭಗವದ್ಗೀತೆ ಪುಸ್ತಕ.

-ಹವ್ ಮಚ್?
ಹಂಡ್ರೆಡ್ ರುಪೀಸ್..

ಯಾವ ಪುಸ್ತಕದಲ್ಲೂ ಬೆಲೆ ನಮೂದಿಸಿಲ್ಲ. ಆದ್ರೆ ಈ ಹರಿಭಕ್ತನ ಪ್ರಕಾರ ಎಲ್ಲ ಪುಸ್ತಕಗಳ ಬೆಲೆ 100 ರೂ. ಒಂದು ಪುಸ್ತಕ ಖರೀದಿಸಿ 100 ರೂ. ಕೊಟ್ಟೆ.  ಕೈ ಕುಲುಕಿ 'ಥ್ಯಾಂಕ್ಯೂ' ಅಂದ. ಆಮೇಲೆ, ಅವನೇ ಪ್ರಶ್ನೆ ಹಾಕಿದ;

-ಆರ್ ಯೂ ಫ್ರಮ್ ಉದುಪಿ? 
ಯಸ್..
-ಇಂಟರ್ನೆಟ್, ಗೂಗಲ್, ಸರ್ಚ್, ಉದುಪಿ, ಇಸ್ಕಾನ್, ಕಮ್ ಆನ್ ಸಂಡೆ. ಲಾಟ್ಸ್ ಆಫ್ ಬುಕ್ಸ್..

ಅಂತ ಸ್ಪೈಲು ಮಾಡಿ ನನ್ನ ಪ್ರತಿಕ್ರಿಯೆಗೆ ಕಾಯದೆ,

"ಬನ್ನಿಬನ್ನಿ.. ಒಳ್ಳೆಒಳ್ಳೆ ಬುಕ್ಸ್.. ತಗೊಳಿ.." ಅನ್ನುತ್ತಾ ಮುಂದೆ ಸಾಗಿದ.

ಅದೆಲ್ಲೋ ರಷ್ಯಾದಲ್ಲಿ ಹುಟ್ಟಿದವನಿಗೆ ನಮ್ಮ ಕೃಷ್ಣನ ಜೊತೆ ಈ ಕನ್ನಡಾ ಕನೆಕ್ಷನ್ನು..

ಜಗತ್ತು ವಿಸ್ಮಯಗಳ ಸಂತೆ!

No comments:

Post a Comment