ಶಾಲೆಯ ‘ಬಿಬಿಸಿ’ ಪವನ್, ಗೇಟ್ ದಾಟ್ತಿದ್ದ ಹಾಗೆ ಓಡ್ ಬಂದ.
“ಏನೇ ಹೇಗಿದಿಯಾ? ಬೆಳ್ಬೆಳಗ್ಗೆ ಎಲ್ಲಿಂದ ಬರ್ತಿದೀಯಾ? ತಿಂಡಿ..?” ಅನ್ನೊ ನನ್ನ ಪ್ರಶ್ನೆಗಳಿಗೆ, “ಅಜ್ಜಿ ಮನೆಗ್ ಹೋಗಿದ್ದೆ. ಅಲ್ಲೇ ತಿಂಡಿ ಆಯ್ತು..” ಅಂದವಳೇ ದೊಡ್ಡ ಹೆಂಗಸಿನ ಥರ, “ಮಿಸ್.., ನೀವು ಪಾಸ್ ಮಾಡ್ಸ್‌ಕೊಂಡಿಲ್ವಾ? ಖರ್ಚು ಜಾಸ್ತಿ ಆಗಲ್ವಾ? ಈಗ ನಾವೆಲ್ಲಾ ಇಲ್ವಲ್ಲ.. ಅದ್ಕೆ ಬೇಜಾರಾಗಲ್ವಾ” ಅಂತ ಏನೇನೋ ಕೇಳಿದ್ಲು.
“ಮಿಸ್…, ಮಾಲಾ ನೇಣ್ ಹಾಕೊಂಡ್ ಸತ್ತೋದ್ಲು” ಅಂದ್ಕೂಡ್ಲೆ ಧಗ್ ಅಂತು ಎದೆ. ಹತ್ತು
ವರ್ಷದಲ್ಲಿ ಓದಿ ಹೋದ ನಾಲ್ಕೈದು ಮಾಲಾಗಳು ಒಟ್ಗೆ ಕಣ್ಮುಂದೆ
ಬಂದ್ರು.
“ಯಾವ್ ಮಾಲಾನೋ?” ಅಂದೆ.
“ಅದೇ ಮಿಸ್.. ಕಲಾನ ಅಕ್ಕ,
ಕಾಲೇಜ್ಗೋಗ್ತಿದ್ಲಲ್ಲಾ ಅವ್ಳೆ..” ಅಂತ ಶುರುಮಾಡ್ದ.
ಮಕ್ಳಿಗೆ ಹಾಲು
ರೆಡಿ ಇತ್ತು. “ನಡೀರಿ ಎಲ್ಲಾ..” ಅಂತ, ಕಥೆ ಹೇಳೋಕೆ ಕೇಳೋಕೆ ನಿಂತವ್ರನ್ನ ಕಳ್ಸಿ, ನಾನೂ ಗ್ರೌಂಡ್ಗೆ ಬಂದೆ.
ಕಣ್ಣು ಕಿವಿ ಯಾಂತ್ರಿಕವಾಗಿ ಅಸೆಂಬ್ಲೀಲಿದ್ರೂ ಮನ್ಸು ಮಾತ್ರ ವಾರದ ಹಿಂದೆ ಮಾತಾಡ್ಸಿದ ಮಾಲಾನ ನೆನೀತಿತ್ತು.
ಕೆಲ ದಿನಗಳ ಹಿಂದೆ ಬಸ್ನಲ್ಲಿ ಸಿಕ್ಕಿದ್ಲು..
ಆಡಿಕೊಂಡು ಓದಿಕೊಂಡು ಬೆಳೆಯುವ ಮಕ್ಕಳು- ವಿಶೇಷವಾಗಿ ಹೆಣ್ಮಕ್ಕಳು, ಹರೆಯಕ್ಕೆ ಬರುವ ಹೊತ್ತಿಗೆ ಆತ್ಮಹತ್ಯೆಗೆ ಮನಸ್ಸು ಮಾಡುತ್ತಾರೆ ಅಂದರೆ ಅದರ ಹಿಂದಿರಬಹುದಾದ ಕಾರಣಗಳೇನು? ಅಂಧಶ್ರದ್ಧೆ, ಬಡತನಗಳು ಅಮಾಯಕರ ಬದುಕಿಗೇ ಕೊಳ್ಳಿ ಇಡುತ್ತಿವೆಯಲ್ಲ ಎಂಬ ವಿಷಯ ದಿಗಿಲು ಹುಟ್ಟಿಸುತ್ತದೆ.
“ಏನೇ ಹೇಗಿದಿಯಾ? ಬೆಳ್ಬೆಳಗ್ಗೆ ಎಲ್ಲಿಂದ ಬರ್ತಿದೀಯಾ? ತಿಂಡಿ..?” ಅನ್ನೊ ನನ್ನ ಪ್ರಶ್ನೆಗಳಿಗೆ, “ಅಜ್ಜಿ ಮನೆಗ್ ಹೋಗಿದ್ದೆ. ಅಲ್ಲೇ ತಿಂಡಿ ಆಯ್ತು..” ಅಂದವಳೇ ದೊಡ್ಡ ಹೆಂಗಸಿನ ಥರ, “ಮಿಸ್.., ನೀವು ಪಾಸ್ ಮಾಡ್ಸ್‌ಕೊಂಡಿಲ್ವಾ? ಖರ್ಚು ಜಾಸ್ತಿ ಆಗಲ್ವಾ? ಈಗ ನಾವೆಲ್ಲಾ ಇಲ್ವಲ್ಲ.. ಅದ್ಕೆ ಬೇಜಾರಾಗಲ್ವಾ” ಅಂತ ಏನೇನೋ ಕೇಳಿದ್ಲು.
ನನ್ನ ಉತ್ರ
ಕೇಳಸ್ಕೊಂಡ್ಲೋ ಇಲ್ವೋ ಐದು ನಿಮ್ಷ ಬಿಟ್ಟು “ಮಿಸ್ ನಂಗೆ ಬಿಪಿ ಇದೆ. ಶಾಸ್ತ್ರ ಹೇಳೌರೇ, ನಂಗೆ ಕಂಟಕ ಇದೆ. ನಾನು ಬದ್ಕಲ್ಲ
ಅಂದಿದಾರೆ. ಈಗ ನಮ್ ಲೆಕ್ಚರರ್ಸು ಡಾಕ್ಟ್ರಿಗೆ ತೋರ್ಸಿ ಮಾತ್ರೆ ಕೊಡ್ಸಿದಾರೆ” ಅಂತ ಬಡಬಡಿಸಿದ್ಲು. “ಸುಮ್ನಿರೇ.. ಈ ವಯಸ್ಗೆ ಎಂಥಾ ಬಿಪಿ, ಸುಮ್ನೆ ಏನೇನೋ ಯೋಚ್ನೆ ಮಾಡ್ಬೇಡ, ಓದೋದ್ರ ಕಡೆ ಗಮ್ನ ಕೊಡು” ಅಂದಿದ್ದೆ.
ಶಾಲೆಗೆ ಬಂದು ಅಡಿಗೆಯವ್ರ ಹತ್ರ ಹೇಳಿದ್ದಕ್ಕೆ ನಕ್ಕು, “ಅದು ಬಿಪಿ ಅಲ್ಲ ಮೇಡಂ, ಭೀತಿ. ಅವ್ಳಿಗೆ ಮೊದ್ಲಿಂದ್ಲೂ ಮೈಮೇಲ್ ಬರ್ತಿತ್ತು. ಏನೇನೋ ಮಾತಾಡ್ತಾಳೆ. ಯಾವಾಗ್ಲೂ ಒಬ್ರು ಕಾಯ್ತಿರ್ಬೇಕು. ಇಲ್ಲಾಂದ್ರೆ ಸಾಯ್ತೀನಿ ಅಂತ ಓಡ್ ಹೋಗ್ತಾಳೆ. ಕಾಲೇಜ್ಗೂ ನೆಟ್ಗೆ
ಹೋಗಲ್ಲ, ಬಿಟ್ಹಾಕಿ ಅವ್ಳ
ವಿಷ್ಯ..” ಅಂದ್ರು.
ಯಾಕೆ ಕೆಲವರ
ಮನಸ್ಸು ಅಷ್ಟು ಚಂಚಲ? ಮಾನಸಿಕ ಕಾಯಿಲೆಯೇ?
ಸ್ಥಿಮಿತಕ್ಕೆ ಸಿಗದ ಯೋಚನೆಗಳೇ? ಪ್ರೈಮರಿಯಲ್ಲಿ ಸರಿಯಾಗಿದ್ದ ಮಗು ಕಾಲೇಜಿಗೆ
ಹೋಗುವಷ್ಟರಲ್ಲಿ ಅಷ್ಟೊಂದು ಬದಲಾಗೋಕೆ ಸುತ್ತಲಿನ ಸಮಾಜ
ಕಾರಣವೇ? ಇಲ್ಲಾ ‘ನಮ್ಮ ಮಗಳ ಹಣೆಬರಹ’ ಅಂತ ಕೈಚೆಲ್ಲಿ
ಕೂತ ಮೂರು ಹೆಣ್ಮಕ್ಕಳ ಬಡ ತಾಯ್ತಂದೆಯರೆ?
ಇನ್ನೆರಡು ದಿನ ಈ ಪ್ರಶ್ನೆಗಳಲ್ಲೇ ಮನಸ್ಸು ಹೊಯ್ದಾಡಿ ಹೀಗೆ ಕಾಣದ ಕಾರಣಕ್ಕಾಗಿ ಕಳೆದು ಹೋದ ಮಕ್ಕಳನ್ನು ನೆನೆಸುತ್ತಾ ನಿಟ್ಟುಸಿರು
ಬಿಡಲಿದೆ.
❍ ವೀಣಾ ವಾಸುದೇವ್
ಗೃಹಿಣಿ. ತಾಯಿ. ನಂಜನಗೂಡು ಸಮೀಪದ ಹಳ್ಳಿಯೊಂದರ ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿ. ತಮ್ಮ ವೃತ್ತಿ ಜೀವನದ ಸಿಹಿ-ಕಹಿ ಕ್ಷಣಗಳನ್ನು ಕರಿಹಲಗೆ ಮೂಲಕ ಹಂಚಿಕೊಳ್ಳಲಿದ್ದಾರೆ.


No comments:
Post a Comment