ಮಹಾದಾಯಿ ನೀರಿನ
ಹಂಚಿಕೆ ವಿವಾದ ಬಗೆಹರಿಸಲು ಕೇಂದ್ರದ ನಿರ್ಲಕ್ಷ್ಯ ವಿರೋಧಿಸಿ ಕನ್ನಡಪರ ಸಂಘಟನೆಗಳು ಕರೆ ಕೊಟ್ಟಿದ್ದ
ಬಂದ್ ಅಷ್ಟೇನೂ ಯಶಸ್ವಿ ಆಗ್ಲಿಲ್ಲ ಅಂತ ಬೆಳಗ್ಗೆಯಿಂದಲೇ ಬಹುತೇಕ ಟೀವಿ ಚಾನೆಲ್ಗಳು ಸುದ್ದಿ ಬಿತ್ತರಿಸುತ್ತಿದ್ವು,
ಯಾಕೋ ಗೊತ್ತಿಲ್ಲ! ಇತ್ಲಾಗೆ “ಇವತ್ತು ಅಮಿತ್ ಷಾ ಬರ್ತಿದಾರೆ, ಮಹದಾಯಿಗೂ ಮೈಸೂರಿಗೂ ಏನ್ ಸಂಬಂಧ?
ಬಂದ್ ಬೇಕಿಲ್ಲ” ಅಂದ ಬಿಜೆಪಿ ಮುಖಂಡ ಯಡಿಯೂರಪ್ಪನವರಿಗೆ @jayateerthbn ಕೇಳಿದ ಪ್ರಶ್ನೆ ಮಾರ್ಮಿಕವಾಗಿತ್ತು.
ಮಹಾದಾಯಿ ಕೇವಲ ಉತ್ತರದ ಸಮಸ್ಯೆ ಎಂದು ಇಬ್ಬರೂ ಮಾಜಿ ಮುಕ್ಯಮಂತ್ರಿಗಳಾದ ಯಡಿಯೂರಪ್ಪ ಮತ್ತು ಸದಾನಂದಗೌಡರ ಬಾಯಿಂದ ಹೈಕಮಾಂಡ್ ಹೇಳಿಸಿದೆ. ಇದೇ ರೀತಿ ಪಾಕಿಸ್ತಾನ ಸಮಸ್ಯೆ ದಕ್ಷಿಣ ಬಾರತದ ಸಮಸ್ಯೆಯಲ್ಲವೆಂದು ಯಾರಾದರೂ ಹೇಳಿದರೆ ಸುಮ್ಮನಿರುತ್ತಾರೆಯೇ ಈ ಹೈಕಮಾಂಡ್ ಪಕ್ಷದವರು? ಅವರಿಗೆ ಪಾಕಿಸ್ತಾನದ ಟಿಕೆಟ್ ಕೊಡಿಸಿರುತ್ತಿದ್ದರು.— Jayateerth Nadagouda (@jayateerthbn) January 25, 2018
@sanjayranga39 ಪುಟ್ಟ ಕವಿತೆ ಬರೆದು ಪ್ರತಾಪಸಿಂಹರನ್ನು ತರಾಟೆಗೆ ತಗೊಂಡ್ರು.
ಮಹದಾಯಿ ಹೋರಾಟಕ್ಕೆ ಬಾರೋ ತಿಮ್ಮ!— Sanjay kumar (@sanjayranga39) January 25, 2018
ಅದು ಉತ್ತರ ಕರ್ನಾಟಕದ ಸಮಸ್ಯೆ ಅಮ್ಮ!
ಕಾವೇರಿ ಹೋರಾಟಕ್ಕೆ ಬಾರೋ ತಿಮ್ಮ!
ಅದು ದಕ್ಷಿಣ ಕರ್ನಾಟಕದ ಸಮಸ್ಯೆ ಅಮ್ಮ!
ಹಿಂದಿ ಹೇರಿಕೆಯ ಹೋರಾಟಕ್ಕೆ ಬಾರೋ ತಿಮ್ಮ!
ಹೈಕಮಾಂಡ್ ನವ್ರು ಒದಿತ್ತಾರಲ್ಲಮ್ಮ!
ಕೇರಳ ಹಿಂಸಾಚಾರದ ವಿರುದ್ದದ ಪ್ರತಿಭಟನೆಗೆ ಬಾರೋ ತಿಮ್ಮ!
ಅದಕ್ಕೆ ಮಾತ್ರ ನಾನು ಕೆರಳಿದ ಸಿಂಹ ಅಮ್ಮ!!
@SomBajju ಕರ್ನಾಟಕದ
ಸಂಸದರ ಬಗ್ಗೆ ಬೇಸರ ವ್ಯಕ್ತಪಡಿಸಿದರೆ..
ಪ್ರ.ಜೋಶಿ,ಅ.ಹೆಗಡೆ,ಸು.ಅಂಗಡಿ, ಜಿಗಜಿಣಗಿ,ಕೂಬ,ಕ.ಸಂಗಣ್ಣ,ಶ್ರೀರಾಮುಲು, ಸಿದ್ದೇಶ್ವರ,ಗದ್ದೀಗವ್ಡ,ಉದಾಸಿ ಇವರೆಲ್ಲಾ ಮಹಾದಾಯಿ ವಿಶಯವಾಗಿ ಒಮ್ಮೆಯೂ ಲೋಕಸಬೆಯಲ್ಲಿ ಸೊಲ್ಲೆತ್ತಿಲ್ಲ. ಏನಪ್ಪಾ ಮಾಡ್ತಾ ಇದ್ದಾರಿವರು ಅವರದೇ ಸರ್ಕಾರ ಇಟ್ಕೊಂಡು?.— ಸೋಮಶೇಕರ್ ಬಜ್ಜಣ್ಣ (@SomBajju) January 25, 2018
ಬಿಜೆಪಿ, ಕಾಂಗ್ರೆಸ್ಸು ಎರಡರ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿದವರು @NaanuManjunatha
ಕಾಂಗ್ರೆಸ್ ಮತ್ತು ಬಿಜೆಪಿಯನ್ನು ನಂಬಿದರೆ ಮಹದಾಯಿ ನೀರಿನ ಸಮಸ್ಯೆ ಬಗೆಹರಿಯುವುದು ಕಷ್ಟ. ಇವರು ಕನ್ನಡಿಗರನ್ನು ದೆಹಲಿಯಲ್ಲಿ ಪ್ರತಿನಿಧಿಸಿ ನಮ್ಮ ಸಮಸ್ಯೆಗಳ ಬಗ್ಗೆ ಸೊಲ್ಲೆತ್ತುವ ಬದಲು ತಮ್ಮ ದೆಹಲಿಯ ಹೈ ಕಮಾಂಡ್ ದೊರೆಗಳನ್ನು ಇಲ್ಲಿ ಪ್ರತಿನಿಧಿಸುತ್ತಾರೆ. ಕನ್ನಡಿಗರು ರಾಜಕೀಯವಾಗಿ ಸಂಘಟಿತರಾಗದೆ ಬೇರೆ ದಾರಿಯಲ್ಲಿ. #MahadayiMosa— Manjunath S (@NaanuManjunatha) January 25, 2018
ಮೆಟ್ರೋಫಲಕದಲ್ಲಿ
ಹಿಂದಿ ಬೇಡ ಅನ್ನೋ ಹೋರಾಟದ ಸಂದರ್ಭ ಕೇಂದ್ರದ ಪರ ಬ್ಯಾಟು ಬೀಸಿ ಕನ್ನಡಿಗರಿಗೆ ಹಿಂದಿ ಬರುತ್ತೆ ಅಂತ
ವಾದಿಸಿದ್ದ ಬಿಜೆಪಿ ನಾಯಕರು ಈ ಬಾರಿ ಅಮಿತ್ ಷಾ ಭಾಷಣವನ್ನು ಕನ್ನಡಕ್ಕೆ ತರ್ಜುಮೆ ಮಾಡಿದ್ರು!
ಕನ್ನಡದವರಿಗೆ ಹಿಂದಿ ಬರುತ್ತೆ ಎಂದು ಅನುವಾದವಿಲ್ಲದೇ ಹಿಂದಿ ಬಾಶಣ ಮಾಡುತ್ತಿದ್ದ ಬಿಜೆಪಿಯವರಿಗೆ ಕೊನೆಗೂ ಸ್ವಲ್ಪ ಬುದ್ದಿ ಬಂದಿದೆ. ಇಂದು ಅಮಿತ್ ಶಾ ಹಿಂದಿ ಬಾಶಣಕ್ಕೆ ಕನ್ನಡ ಅನುವಾದ ಮಾಡುತ್ತಿದ್ದಾರೆ.. #KarnatakaBandh— Mallikarjun B (ಮಲ್ಲಿಕಾರ್ಜುನ್ ಬಿ) (@arjuna04) January 25, 2018
ಸಂಜೆ ಮಾಜಿ ಸಿಎಂ
ಯಡಿಯೂರಪ್ಪ ತಮ್ಮ ಪರಿವರ್ತನಾ ಯಾತ್ರೆ ಯಶಸ್ವಿ ಅಂತ ಹೇಳಿಕೊಂಡ್ರು.
ಕಾಂಗ್ರೆಸ್ ಕುತಂತ್ರಕ್ಕೆ ತಕ್ಕ ಪ್ರತ್ಯುತ್ತರ ನೀಡಿದ ಮೈಸೂರಿನ ಜನತೆ. ಬಿಜೆಪಿಯ ಪರಿವರ್ತನಾ ಯಾತ್ರೆ ಯಶಸ್ವಿ. #ParivartanaYatre https://t.co/7nUUpdbnHk— BSY Office (@Office_of_BSY) January 25, 2018
ಅಮಿತ್ ಷಾ ಭಾಷಣದಲ್ಲಿ ಮಹದಾಯಿ ಪ್ರಸ್ತಾಪ ಮಾಡದ್ದಕ್ಕೆ ಕುಟುಕಿದ ಸಿಎಂ ಸಿದ್ದರಾಮಯ್ಯ, ಮುಂದಿನ ಬಾರಿಯಾದ್ರೂ ಮಹದಾಯಿ ಬಗ್ಗೆ ತಿಳ್ಕಂಡು ಬನ್ನಿ ಅಂದ್ರು!
Not his fault! Nobody told him about #Mahadayi . He reads an outdated speech about Tipu, corruption & a fictitious Rs 2 lakh crores that the central Govt supposed to have given us. @AmitShah ravare, next time please read about #Mahadayi before coming here. https://t.co/6KsKGRT9DU— Siddaramaiah (@siddaramaiah) January 25, 2018


No comments:
Post a Comment