ಮಧು ಕಿಶ್ವರ್ ಎಂಬ ಮೊದ್ಮಣಿ ಮತ್ತು ಮೈ ಬಿಸಿ ಏರಿಸಿದ ವಿಶ್ವವಾಣಿ!

ಸೆಂಟರ್‌ ಫಾರ್‌ ಸ್ಟಡಿ ಆಫ್‌ ಡೆವಲಪಿಂಗ್ ಸೊಸೈಟೀಸ್‌ (ಸಿಎಸ್‌ಡಿಎಸ್‌)ನಲ್ಲಿ ಪ್ರೊಫೆಸರ್‌ ಆಗಿರುವ ಲೇಖಕಿ ಮಧು ಕಿಶ್ವರ್‌ ವಾಟ್ಸಪ್‌ನಲ್ಲಿ ಬಂದ ಸುದ್ದಿಯೊಂದನ್ನ ಟ್ವೀಟ್‌ ಮಾಡಿ ಅನೇಕರ ವಾಗ್ದಾಳಿ ಎದುರಿಸಿದರು. ಗುರುಗ್ರಾಮದಲ್ಲಿ ಶಾಲಾ ಬಸ್‌ನ ಮೇಲೆ ದಾಳಿ ನಡೆಸಿದವರು ಮುಸ್ಲೀಮರು ಎಂದು ಐವರ ಹೆಸರನ್ನು ಉಲ್ಲೇಖಿಸಿದ್ದ ಮಧು, ಇದು ನಿಜವೇ ಆಗಿದ್ದರೆ ಪದ್ಮಾವತ್‌ ಚಿತ್ರದ ವಿರುದ್ಧದ ಗಲಭೆ ಕುತಂತ್ರ ಎಂಬುದು ಬಯಲಾದಂತಾಗಿದೆ ಎಂದು ಟಿಪ್ಪಣಿ ಹಾಕಿದ್ದರು. ಆದರೆ ಅಸಲಿಗೆ ಅದು ಸುಳ್ಳು ಸುದ್ದಿಯಾಗಿತ್ತು.  @Joydas ಟ್ವೀಟ್‌ನ ಜೊತೆ ಮಧು ಮೇಡಂ ಬಣ್ಣವನ್ನೂ ಬಯಲು ಮಾಡಿದ್ರು
ಮೊನಚು ಮಾತಿಗೆ ಹೆಸರಾಗಿರುವ @RoflGandhi_ ಈಗಾಗಲೇ ದಾಳಿ ನಡೆಸಿದರವನ್ನು ಬಂಧಿಸಿರುವುದು ನಿಜ. ಅವರ ಭಾವಚಿತ್ರಗಳನ್ನು ಸುದರ್ಶನ ಟಿವಿ ಬಿಡುಗಡೆ ಮಾಡಿದೆ ಎಂದು ತಿವಿದರು.
‘ಇದು ನಿಜವಾಗಿದ್ದರೆ’ ಎಂಬ ಒಕ್ಕಣೆ ಹಾಕಿ ಸುಳ್ಳು ಸುದ್ದಿ ಹರಡುವ ಚಾಳಿ ಮಧು ಕಿಶ್ವರ್ಗೆ ಮೊದಲಿನಿಂದಲೂ ಇದೆ ಅಂತ ಗಮನಕ್ಕೆ ತಂದಿದ್ದು @bainjal
ಕಡೆಗೆ ತಮ್ಮ ಫೇಕ್ ನ್ಯೂಸ್ನ ಟ್ವೀಟ್ ಡಿಲೀಟ್ ಮಾಡಿದ ಮಧು ಕಿಶ್ವರ್ ಕ್ಷಮೆ ಕೇಳಿದ್ರು.

ರಿಪಬ್ಲಿಕ್ ಡೇ ದಿನ ವಿಶ್ವವಾಣಿ ಪತ್ರಿಕೆಯ ಮುಖಪುಟ ಬಹುತೇಕ ಗಂಡಸರ ಚಳಿ ಬಿಡಿಸಿ ಮೈ ಕಾವೇರುವಂತೆ ಮಾಡಿತು! ರಾಮ್ ಗೋಪಾಲ್ ವರ್ಮಾ ಚಿತ್ರಿಸಿರುವ ನೀಲಿ ಚಿತ್ರಗಳ ತಾರೆ ಮಿಯಾ ಮಲ್ಕೋವಾಳ ಬದುಕಿನ ಕುರಿತ ಡಾಕ್ಯುಮೆಂಟರಿಯ ಬಗ್ಗೆ ಮಾಡಿದ ವರದಿಯಲ್ಲಿ ಮಿಯಾಳ ಪೂರ್ಣ ಬೆತ್ತಲೆ ಚಿತ್ರಗಳನ್ನು ಮಾಸ್ಕ್ ಮಾಡದೆ ಪ್ರಕಟಿಸಿದ್ದು ಹಲವರನ್ನು ಕೆರಳಿಸಿತ್ತು.
ಈ ಟೀಕೆಗಳಿಗೆ ವಿರುದ್ಧವಾದ ಅಭಿಪ್ರಾಯ ವ್ಯಕ್ತಪಡಿಸಿ ವಿಶ್ವವಾಣಿ ನಡೆಯನ್ನು ಸಮರ್ಥಿಸಿದ @Sachinkolekar82 ಯಾರ್ಯಾರಿಗೆ ಇದರಲ್ಲಿ ಕೊಳಕು ಕಂಡಿದೆಯೋ ಅವರ ಮನಸ್ಸಿನಲ್ಲೇ ಕೊಳಕಿದೆ ಅಂದರು!
ಯಾರು ಏನೇ ಅನ್ನಲಿ, ಯಾವತ್ತೂ ವಿಶ್ವವಾಣಿ ಓದದ ಕೆಲವರು ರಿಪಬ್ಲಿಕ್‌ ಡೇ ದಿನ  ಅದನ್ನು ಓದಿದರು; ಇನ್ನು ಕೆಲವರು ಐದನೇ ಪುಟವನ್ನು ಕದ್ದುಮುಚ್ಚಿ ಮತ್ತೆ ಮತ್ತೆ ನೋಡಿ ಚಳಿ ಕಾಯಿಸಿಕೊಂಡರು! 😜

No comments:

Post a Comment